ಹರಿಹರದ ತುಂಗಭದ್ರಾ ಕ್ರೆಡಿಟ್‌ ಸೊಸೈಟಿಗೆ 3.32 ಕೋಟಿ ಲಾಭ

ಸಂಘದ 37ನೇ ವಾರ್ಷಿಕ ಸಭೆಯಲ್ಲಿ ಸಹಕಾರಿ ಅಧ್ಯಕ್ಷ ಹೇಮಂತ್ ರಾಜ್ ಹರ್ಷ

ಹರಿಹರ, ಡಿ. 19 – ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮವಾಗಿ ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 3 ಕೋಟಿ 32 ಲಕ್ಷ ರೂಪಾಯಿ ಲಾಭ ಗಳಿಸುವ ಮೂಲಕ ಜಿಲ್ಲೆಯಲ್ಲಿ ಸಂಸ್ಥೆ ಉತ್ತಮವಾಗಿ ಬೆಳೆದಿದೆ ಎಂದು  ಸೊಸೈಟಿ ಅಧ್ಯಕ್ಷ ಡಿ. ಹೇಮಂತ್ ರಾಜ್ ಹರ್ಷ ವ್ಯಕ್ತಪಡಿಸಿದರು.

ನಗರದ ಹೆಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ದಿ ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 37ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರಿಗೆ ಶೇ.16 ರಂತೆ ಡಿವಿಡೆಂಡ್ ನೀಡಲಾಗುತ್ತದೆ ಎಂದು ಹೇಳಿದರು.

ಗ್ರಾಹಕರು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಿದಾಗ ಸಂಸ್ಥೆ ಪ್ರಗತಿ ಯಾಗುತ್ತದೆ. ನಮ್ಮ ಗ್ರಾಹಕರು ಕೊರೊನಾ ಸಂಕಷ್ಟದ ಸಮಯದಲ್ಲೂ ಸಹ ಸೊಸೈಟಿ ಯಿಂದ ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡಿದ್ದರ ಫಲವಾಗಿ ಜಿಲ್ಲೆಯಲ್ಲಿ ಪ್ರಥಮ ಶ್ರೇಣಿಯ ಸೊಸೈಟಿ ಎಂಬ ಹೆಗ್ಗಳಿಕೆ ಗಳಿಸಿದೆ ಎಂದರು.

ತುಂಗಭದ್ರಾ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿಯನ್ನು ಪ್ರಾರಂಭದಲ್ಲಿ 40 ಕೋಟಿ ಬಂಡವಾಳದೊಂದಿಗೆ ಪ್ರಾರಂಭ ಮಾಡಿದ್ದು, ಇಂದಿಗೆ 5,349 ಸಂಘದ ಸದಸ್ಯ ರಿದ್ದು, ಇದರಲ್ಲಿ 2,721 ಸಹ ಸದಸ್ಯರಿಂದ 3,00,65,986 ರೂಪಾಯಿ ಷೇರು ಬಂಡ ವಾಳ ಹೊಂದಿದೆ, ಈ ಆರ್ಥಿಕ ವರ್ಷದಲ್ಲಿ 5.12 ಕೋಟಿ ಠೇವಣಿ ಸಂಗ್ರಹಿಸುವುದ ರೊಂದಿಗೆ ಸಂಘದ ಒಟ್ಟು ಠೇವಣಿ 47.99 ಕೋಟಿಗಳಿಂದ ರೂ 53.11 ಕೋಟಿಗಳಿಗೆ ಏರಿಕೆಯಾಗಿದೆ ಎಂದರು.

ತುಂಗಭದ್ರಾ ಕ್ರೆಡಿಟ್ ಸೊಸೈಟಿ ನಿರ್ದೇಶಕ ಹಾಗೂ ಸಂಸ್ಥಾಪಕ ಅಧ್ಯಕ್ಷ ಎಂ. ಶಿವಾನಂದಪ್ಪ ಮಾತನಾಡಿ, ಸಂಘವು ಕೇವಲ ಸಾಲ ಮತ್ತು ಮುಂಗಡಗಳನ್ನು ನೀಡಿ  ಲಾಭ ವನ್ನು ಗಳಿಸುವ ಉದ್ದೇಶವನ್ನಿಟ್ಟುಕೊಳ್ಳದೇ ಸಂಘದ ಸದಸ್ಯರಿಗೆ ಇತರೆ ಸೇವೆಗಳನ್ನು ಒದಗಿಸುತ್ತಿದೆ. 

ಸದಸ್ಯರ ಮರಣೋತ್ತರ ನಿಧಿ ಯಿಂದ ಮರಣ ಹೊಂದಿದ ಸದಸ್ಯರ ವಾರ ಸುದಾರರಿಗೆ 1,97,000 ರೂ.ಗಳನ್ನು 40 ಜನರಿಗೆ ನೀಡಲಾಗಿದೆ ಎಂದು ಹೇಳಿದರು. 

ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. 85 ಕ್ಕೂ ಹೆಚ್ಚು ಅಂಕಗಳನ್ನು ಪಡೆದ 24 ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಜಿ. ಶರತ್ ವಾರ್ಷಿಕ ವರದಿ ಓದಿದರು. ವಿಶೇಷ ಆಹ್ವಾನಿತರಾದ ಶಿವಪ್ರಕಾಶ್ ಶಾಸ್ತ್ರಿ ಸೊಸೈಟಿ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆರ್.ಕೆ. ಮಂಜುನಾಥ್, ನಿರ್ದೇಶಕರಾದ ಎಂ. ಶಿವಾನಂದಪ್ಪ, ಜಿ.ಎಸ್. ಚೆನ್ನಬಸಪ್ಪ, ಸೈಯದ್ ಇಫ್ತೇಕಾರ್ ಆಹ್ಮದ್, ಜಿ. ಮಂಜಪ್ಪ, ಪಿ. ಶಿವಣ್ಣ, ಎಂ. ಹನುಮಂತಪ್ಪ, ಪ್ರಕಾಶ್ ದಿವಟೆ, ಕೆ.ಬಿ. ಮಂಜುನಾಥ್, ಸಂಜಯ್ ಮಂಜುನಾಥ್, ಎಲ್.ಪಿ. ಮಮತ, ಎ.ಬಿ. ಗಂಗಮ್ಮ, ವಿಶೇಷ ಆಹ್ವಾನಿತರು ರುದ್ರೇಶ್ ಕೆ.ವಿ. ಶಿವಪ್ರಕಾಶ್ ಶಾಸ್ತ್ರಿ, ಸಿಬ್ಬಂದಿಗಳಾದ ಜಿ.ಎಂ‌. ಗಾಯತ್ರಿ, ಎ.ಎನ್. ರಾಧ, ಕೆ. ಲಿಂಗರಾಜ್, ಡಿ.ಇ. ಸಂತೋಷಕುಮಾರ್, ಜಿ.ಆರ್. ವಿನಾಯಕ ಹೆಚ್. ಕೃಷ್ಣ, ಪಿಗ್ಮಿ ಸಂಗ್ರಹಕರಾದ ಜಿ.ಎಂ. ಮೋಹನ್, ಹಾಲೇಶಪ್ಪ ಜಿ., ಎಂ.ಬಿ. ಮಹೇಂದ್ರ, ಹೆಚ್.ಎ. ಆಂಜನೇಯ, ಹೆಚ್.ವೈ. ಮಾರುತಿ, ನಾಗರಾಜ್ ವಿ. ದೇವರಹಳ್ಳಿ, ಎಂ. ಹನುಮಂತಪ್ಪ, ಎನ್.ಎಸ್. ಉಮೇಶ್, ಎಸ್. ಪ್ರಭಾಕರ್, ಜಿ.ಕೆ. ಸುರೇಶ್, ಕೆ.ಸಿ. ಶಿವಶಂಕರ್, ಕೆ.ಬಿ. ಶಿವಕುಮಾರ್, ಎನ್.ಸಿ. ವಿಜಯಕುಮಾರ್, ಎಸ್.ಎನ್. ಬಸವರಾಜ್, ಹೆಚ್.ಕೆ. ಮಂಜುನಾಥ್, ಹಾಲೇಶ್ ಬಾವಿಕಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!