ಹರಿಹರದಲ್ಲಿ ಯೆನೆಪೋಯ ಆಸ್ಪತ್ರೆ ಉದ್ಘಾಟನೆ

ಹರಿಹರ, ಡಿ.19- ನಗರದ ಜನ ತೆಯ ಆರೋಗ್ಯದ ಹಿತ ದೃಷ್ಟಿಯಿಂದ ಮಂಗಳೂರಿನ ಯೆನೆಪೋಯ ಆಸ್ಪತ್ರೆ ಯವರು ನಗರದಲ್ಲಿ ಆರೋಗ್ಯ ಕೇಂದ್ರವನ್ನು ತೆರೆದಿರುವುದು, ಬಡವರಿಗೆ ಕಡಿಮೆ ದರದಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ದಾರಿಯಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಎಸ್.ರಾಮಪ್ಪ ಕರೆ ನೀಡಿದ್ದಾರೆ.

ನಗರದ ಶಿವಮೊಗ್ಗ ರಸ್ತೆಯ ಸಿದ್ದೇಶ್ವರ್ ಸಂಕೀರ್ಣದಲ್ಲಿ ಯೆನೆಪೋಯ ಆರೋಗ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಲೇಬೆನ್ನೂರು ನಗರದಲ್ಲಿ ಕೇಂದ್ರವನ್ನು ತೆರೆಯುವಂತೆ ಸಲಹೆ ನೀಡಿದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ದಿನಕ್ಕೊಂದು ಕಾಯಿಲೆ ಹರಡುತ್ತಿರುವುದರಿಂದ ಮನುಷ್ಯನಿಗೆ ಯಾವ ಸಮಯದಲ್ಲಿ ಯಾವ ಕಾಯಿಲೆ ಬರುತ್ತದೆ ಎಂದು ಊಹಿಸಲು ಅಸಾಧ್ಯ ಎನ್ನುವಂತಾಗಿದೆ. ಇಂತಹ ಸಮಯದಲ್ಲಿ ಹರಿಹರ ತಾಲ್ಲೂಕಿನ ಸುತ್ತಮುತ್ತಲಿನ ಜನರಿಗೆ ಕಡಿಮೆ ದರದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವುದಕ್ಕೆ ಯೆನೆಪೋಯ ಆಸ್ಪತ್ರೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ರತ್ನ ಡಿ.ಉಜ್ಜೇಶ್, ತಾ.ಪಂ ಮಾಜಿ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ, ಮಿಠಾಯಿ ರಾಘ ವೇಂದ್ರ, ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿಜಯಾನಂದ ಶೆಟ್ಟಿ, ಚೀಫ್ ಫಾರ್ಮಾಸಿಸ್ಟ್  ಮೊಹಮ್ಮದ್ ಆಶ್ರಫ್,  ಸಿ.ಎನ್.ಹುಲಗೇಶ್, ಡಾ. ಪ್ರೀತಿ, ಮೊಹಮ್ಮದ್ ಅಲಿ,  ಡಾ. ಇಬ್ರಾಹಿಂ ನಾಗನೂರು,  ರುದ್ರೆಗೌಡ, ಡಾ. ನಾಗರಾಜ್ ಶೇಟ್, ಮುಗ್ದುಂ, ದಾದಾಪೀರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!