ದಾವಣಗೆರೆ, ಡಿ.17- ಇಲ್ಲಿನ ಡಿಸಿಎಂ ಲೇಔಟ್ ಹಿಂಭಾಗದ ರಾಜೇಂದ್ರ ಬಡಾವಣೆಯ ಲ್ಲಿರುವ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ ಇಂದು ಸಂಜೆ ಕಾರ್ತಿಕೋತ್ಸವ ವಿಜೃಂಭಣೆಯಿಂದ ನೆರವೇರಿತು. ನಿಟ್ಟುವಳ್ಳಿಯ ಬನಶಂಕರಿ ದೇವಸ್ಥಾನ ಸಮಿತಿ ಮತ್ತು ಬನಶಂಕರಿ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 8ನೇ ವರ್ಷದ ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಭಕ್ತರು ಭಕ್ತಿ-ಭಾವದಿಂದ ಬೆಳಗಿದ ಜ್ಯೋತಿಯ ಬೆಳಕು ಪ್ರಕಾಶಿಸಿತು. ಬನಶಂಕರಿ, ಗಾಯತ್ರಿ ಮತ್ತು ಲಕ್ಷ್ಮಿ ದೇವಿ ದೇವತೆಗಳಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ವಿಶೇಷವಾಗಿ ಅಲಂಕರಿಸಲಾಗಿತ್ತು.
February 24, 2025