ಇಂಡಿಯಾ ಇಂಟರ್ ನ್ಯಾಷನಲ್ ಸೈನ್ಸ್ ಫೆಸ್ಟಿವಲ್ : ಬಿಐಇಟಿಗೆ 5ನೇ ಸ್ಥಾನ

ದಾವಣಗೆರೆ, ಡಿ. 17- ಕೇಂದ್ರ ಸರ್ಕಾರದ ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಇಲಾಖೆ, ವಿಜ್ಞಾನ ಭಾರತಿ ಹಾಗೂ ಸರ್ಕಾರದ ಸಹಯೋಗದಲ್ಲಿ ಗೋವಾದ ಪಣಜಿಯಲ್ಲಿ ಆಯೋಜಿಸಿದ್ದ ಇಂಡಿಯಾ ಇಂಟರ್ ನ್ಯಾಷನಲ್ ಸೈನ್ಸ್ ಫೆಸ್ಟಿವಲ್‌ನಲ್ಲಿ ನಗರದ ಬಿಐಇಟಿ ಮೆಕ್ಯಾನಿಕಲ್ ವಿದ್ಯಾರ್ಥಿಗಳಾದ ಅಂಕಿತ ಅಮರ್‌ಗೋಳ್ ಹಾಗೂ ಅಮೋಘ ತಾವು ಸಿದ್ಧಪಡಿಸಿದ  ರೋಬೋ ಪ್ರದರ್ಶಿಸಿ ಐದನೇ ಸ್ಥಾನ ಪಡೆದಿದ್ದಾರೆ.

ಅಧ್ಯಾಪಕರುಗಳಾದ.ಬಿ.ಬಸವರಾಜ್ ಮತ್ತು ಡಾ.ಶರಣ್ ಎ.ಎಸ್.ಅವರ ಮಾರ್ಗದರ್ಶನದಲ್ಲಿ ಈ ರೋಬೋವನ್ನು ಸಿದ್ಧಪಡಿಸಲಾಗಿದೆ. ಬಿಐಇಟಿ ಕಾಲೇಜಿನ ನಿರ್ದೇಶಕರು, ಪ್ರಾಂಶುಪಾಲರು ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

error: Content is protected !!