ದಾವಣಗೆರೆ, ಡಿ.17- ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ವಿಭಾಗೀಯ ಅಂಚೆ ಕಚೇರಿ ಸ್ಥಾಪನೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕೇಂದ್ರ ಸಂವಹನ ಖಾತೆ ಸಚಿವ ರಾದ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿ ಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಹಾಲಿ ಇರುವ ಚಿತ್ರದುರ್ಗ ವಿಭಾಗೀಯ ಅಂಚೆ ಕಚೇರಿಯಿಂದಾಗುವ ಅನುಕೂಲತೆ ಹಾಗೂ ದಾವಣಗೆರೆ ಜಿಲ್ಲೆ ಚಿತ್ರದುರ್ಗ, ಶಿವಮೊಗ್ಗ ಹಾಗೂ ಹರಪನಹಳ್ಳಿ ಈಗ ಮೂರು ವಿಭಾಗೀಯ ಅಂಚೆ ಕಚೇರಿಯೊಂದಿಗೆ ಹಂಚಿ ಹೋಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಯಾವುದೇ ಆರ್ಥಿಕ ಹೊರೆಯಾಗ ದಂತೆ ಯಾವ ರೀತಿ ದಾವಣಗೆರೆ ವಿಭಾಗೀಯ ಅಂಚೆ ಕಚೇರಿಯನ್ನು ಪುನರ್ ರಚಿಸಬೇಕು ಎಂಬುದನ್ನು ಪತ್ರದಲ್ಲಿ ವಿವರಿಸಿ, ಸಚಿವರಿಗೆ ಮನದಟ್ಟು ಮಾಡಿಕೊಟ್ಟರು. ವಿಭಾಗೀಯ ಅಂಚೆ ಕಚೇರಿ ಮಾಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.