ಅತ್ಯುತ್ತಮ ಸೇವೆಗೆ ಕಾರ್ಯಸನ್ನದ್ಧ : ಬಿಷಪ್ ಫ್ರಾನ್ಸಿಸ್ ಸೆರಾವೋ
ಹರಿಹರ, ಡಿ. 14 – ನಗರದ ಆರೋಗ್ಯ ಮಾತೆ ಆಸ್ಪತ್ರೆ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯುತ್ತಮ ಸೇವೆಯನ್ನು ನೀಡುವಲ್ಲಿ ಕಾರ್ಯ ಸನ್ನದ್ಧವಾಗಿದೆ. ಇದರ ಉಪಯೋಗವನ್ನು ಹರಿಹರ ನಗರ ಮತ್ತು ತಾಲ್ಲೂಕಿನ ಜನತೆ ಪಡೆಯಬೇಕೆಂದು ಶಿವಮೊಗ್ಗ ಕ್ರೈಸ್ತ ಧರ್ಮಾ ಧ್ಯಕ್ಷ ಫ್ರಾನ್ಸಿಸ್ ಸೆರಾವೋ ತಿಳಿಸಿದರು.
ನಗರದ ಹೊರವಲಯದ ಅಮ ರಾವತಿ ಕಾಲೋನಿಯಲ್ಲಿರುವ ಆರೋಗ್ಯ ಮಾತೆ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಅತ್ಯಾಧು ನಿಕ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠವಾ ದುದು ಜೀವದಾನ. ಈ ನಿಟ್ಟಿನಲ್ಲಿ ಕ್ರೈಸ್ತ ಸಮುದಾಯದ ಧರ್ಮಭಗಿನಿಯರು ಈ ಆಸ್ಪತ್ರೆಯನ್ನು ಸೇವಾ ಮನೋಭಾವದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದರ ಉಪ ಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಭೇಟಿ ನೀಡಿ, ಕ್ರೈಸ್ತ ಸಮುದಾಯದ ಜನರು ಶಿಕ್ಷಣ ಹಾಗೂ ವೈದ್ಯಕೀಯ ಸೇವೆಯನ್ನು ನೀಡುವಲ್ಲಿ ಸದಾ ಮುಂದೆ ಇದ್ದಾರೆ ಎಂದು ತಿಳಿಸಿದರು.
ಸಿಐಸಿ ಸಭೆಯ ಪ್ರಾಂತ್ಯಾಧಿಕಾರಿ ಸಿಸ್ಟರ್ ಡೈಜಿರಾಣಿ ಮತ್ತು ಡಾ.ಪ್ರಕಾಶ್ ಮಾತನಾಡಿದರು.
ಆರೋಗ್ಯ ಮಾತೆ ದೇವಾಲಯದ ಧರ್ಮಗುರು ಡಾ.ಅಂತೋನಿ ಪೀಟರ್ ಶುಭ ಕೋರಿ, ಆಸ್ಪತ್ರೆಯ ಮುಖ್ಯಸ್ಥರಾದ ಸಿಸ್ಟರ್ ಇನ್‍ಫೆಂಟಾ ಇವರು ಈ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಲು ಶ್ರಮಪಟ್ಟಿದ್ದಾರೆ. ಸ್ಥಳೀಯ ಜನರ ಆರೋಗ್ಯ ಕಳಕಳಿಯುಳ್ಳ ಈ ಧರ್ಮಭಗಿನಿಯರ ಸೇವೆ ಇನ್ನೂ ಹೆಚ್ಚಾಗಲಿ ಎಂದು ಹಾರೈಸಿದರು.
ಡಾ.ಜಗನ್ನಾಥ್, ಡಾ.ಪ್ರೀತಿ ಜೆನ್ನಿಫರ್, ಸಿಐಸಿ ಸಭೆಯ ನಿಕಟಪೂರ್ವ ಪ್ರಾಂತ್ಯಾಧಿಕಾರಿ ಸಿಸ್ಟರ್ ಜ್ಞಾನಸೌಂದರಿ, ಸಿಸ್ಟರ್ ಜೆನ್ನಿಫರ್, ಆರೋಗ್ಯ ಸ್ವಾಮಿ ಸುರೇಶ್, ಫಾದರ್ ವಿನ್ಸೆಂಟ್, ಫಾದರ್ ಡೇವಿಡ್, ಫಾದರ್ ಅಂತೋನಿ ಡಿಸೋಜಾ ಉಪಸ್ಥಿತರಿದ್ದರು.
ಅಮರಾವತಿ ಗ್ರಾಮದ ವಾರ್ಡ್ ಕೌನ್ಸಿಲರ್ ಬಾಬಣ್ಣ, ಮಾಲತೇಶ್ ಸೇರಿದಂತೆ ಹಾಜರಿದ್ದರು. ಸಿಸ್ಟರ್ ಲಿಲ್ಲಿ ನಿರೂಪಿಸಿದರು. ಕೋಮಲ ವಂದಿಸಿದರು.