ನೋಟರಿ ಕಾಯ್ದೆ ತಿದ್ದುಪಡಿಗೆ ವಿರೋಧ

ಸೇವೆ ಸ್ಥಗಿತಗೊಳಿಸಿ, ಸರ್ಕಾರದ ಗಮನ ಸೆಳೆದ ನೋಟರಿಗಳು

ದಾವಣಗೆರೆ, ಡಿ.14- ಕೇಂದ್ರ ಸರ್ಕಾ ರದ ನೋಟರಿ ಕಾಯ್ದೆ-2021 ತಿದ್ದುಪಡಿ ಯನ್ನು ಹಿಂಪಡೆಯುವಂತೆ ಆಗ್ರಹಿಸಿ, ಜಿಲ್ಲಾ ನೋಟರಿ ಸಂಘದ ನೇತೃತ್ವದಲ್ಲಿ ನಗ ರದಲ್ಲಿಂದು ನೋಟರಿಗಳು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘದ ಅಧ್ಯಕ್ಷ ಕೆ. ಈಶ್ವರ್, ಕಾರ್ಯದರ್ಶಿ ತ್ಯಾವಣಿಗೆ ಮಲ್ಲಿಕಾರ್ಜುನ್‌ ಸೇರಿದಂತೆ, ಇತರರ ನೇತೃತ್ವದಲ್ಲಿ ಜಮಾಯಿಸಿದ್ದ ನೋಟರಿಗಳು, ಕೇಂದ್ರ ಸರ್ಕಾರದ ನೋಟರಿ ಕಾಯ್ದೆ-2021 ತಿದ್ದುಪಡಿಗೆ ವಿರೋಧಿಸಿದರು. ನಂತರ ಕಾಯ್ದೆ ತಿದ್ದುಪಡಿ ಹಿಂಪಡೆದು ಈ ಹಿಂದಿದ್ದ ನೋಟರಿಗಳ ಪರವಾಗಿರುವ 1952ರ ನೋಟರಿ ಕಾಯ್ದೆ ಮುಂದುವರೆಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

1952ರಲ್ಲಿ ಇದ್ದಂತಹ ನೋಟರಿ ಕಾಯ್ದೆ ನೋಟರಿಗಳ ಪರವಾಗಿತ್ತು. ಈಗ ಕೇಂದ್ರ ಸರ್ಕಾರವು ಮುಂದಾಗಿರುವ ನೋಟರಿ ಕಾಯ್ದೆ 2021ರ ತಿದ್ದುಪಡಿ ಯಿಂದ ನೋಟರಿಗಳ ಬದುಕಿಗೆ ಕರಾಳ ವಾಗಲಿದೆ. ನೋಟರಿಗಳು ಮೊದಲು ಪ್ರತಿ 5 ವರ್ಷಕ್ಕೊಮ್ಮೆ ನವೀಕರಣಗೊಳಿಸ ಬೇಕಿತ್ತು. ಈ ತಿದ್ದುಪಡಿ ಕಾಯ್ದೆಯಿಂದ 15 ವರ್ಷ ಕಾಲ ನೋಟರಿ ಗಳಾಗಿ ಕಾರ್ಯ ನಿರ್ವಹಿಸಿ ದವರಿಗೆ ಮತ್ತೆ ಮುಂದುವರೆ ಯಲು ಅವಕಾಶ ಸಿಗುವುದಿಲ್ಲ ಎಂದು ಪ್ರತಿಭಟನಾ ನಿರತ ನೋಟರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ 20 ಜನ ಸೇರಿ ಜಿಲ್ಲೆಯಲ್ಲಿ ಒಟ್ಟು 50 ಮಂದಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಒಳಪಟ್ಟ ನೋಟರಿಗಳು ಕಾರ್ಯ ನಿರ್ವಹಿಸುತ್ತಿದ್ದು, ವಕೀಲ ವೃತ್ತಿ ಯಿಂದಲೂ ಹೊರಗುಳಿದಿದ್ದೇವೆ. ಈಗ ಇದ್ದಕ್ಕಿದ್ದಂತೆ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತಂದರೆ ಬದುಕು ಸಂಕಷ್ಟ ವಾಗಲಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಹೊಸಬರನ್ನು ನೋಟರಿಗಳಾಗಿ ಆಯ್ಕೆ ಮಾಡಿಕೊಳ್ಳಲು ನಮ್ಮ ಆಕ್ಷೇಪವಾಗಲೀ, ವಿರೋಧವಾಗಲೀ ಇಲ್ಲ. ಆದರೆ, ನಮ್ಮ ಸೇವೆಯನ್ನು ಪರಿಗಣಿಸಿ, ಅವಕಾಶ ನೀಡುವ ಕೆಲಸ ಸರ್ಕಾರಗಳು ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ರೇವಣಸಿದ್ದಪ್ಪ, ಮಾಯಕೊಂಡ ಪ್ರತಾಪರುದ್ರ, ಖಜಾಂಚಿ ಸಾಯೀಶ್, ಕೆ.ಎಂ. ನೀಲಕಂಠಯ್ಯ ಸೇರಿದಂತೆ, ಇತರರು ಭಾಗವಹಿಸಿದ್ದರು.

error: Content is protected !!