ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ ಪಟ್ಟಾಧಿಕಾರದ ವಾರ್ಷಿಕೋತ್ಸವ

ಹರಪನ ಹಳ್ಳಿ, ಡಿ.14 – ಮಧ್ಯ ಕರ್ನಾಟಕ ದಲ್ಲಿ ಶೈಕ್ಷಣಿಕ ಕ್ರಾಂತಿ ಬಿತ್ತಿದ  ಹರಪನಹಳ್ಳಿ ತೆಗ್ಗಿನ ಮಠ ಸಂಸ್ಥಾನದ ಶ್ರೀ ಲಿಂಗೈಕ್ಯ ಚಂದ್ರ ಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿ ಗಳವರ 7ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಶ್ರೀ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳ 6ನೇ ವರ್ಷದ ಪಟ್ಟಾಧಿಕಾರ ಕಾರ್ಯಕ್ರಮ ತೆಗ್ಗಿನ ಮಠ ಸಂಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೆಗ್ಗಿನ ಮಠ ಸಂಸ್ಥಾನದ ಆಡಳಿತಾಧಿಕಾರಿ ಟಿ.ಎಂ. ಚಂದ್ರಶೇಖರಯ್ಯ ತಿಳಿಸಿದರು.

ಪಟ್ಟಣದ ತೆಗ್ಗಿನಮಠ ಸಂಸ್ಥಾನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಗ್ಗಿನ ಮಠ ಸಂಸ್ಥಾನವನ್ನು ಮಧ್ಯ ಕರ್ನಾಟಕದ  ಶೈಕ್ಷಣಿಕ ಕ್ರಾಂತಿ ಎಂದು ಕರೆಯುತ್ತಾರೆ. ಈ ಸಂಸ್ಥೆಯ ವಿದ್ಯಾಸಂಸ್ಥೆಯಲ್ಲಿ ಅನೇಕ ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದುಕೊಂಡು ಉನ್ನತ ಸ್ಥಾನದಲ್ಲಿದ್ದಾರೆ. ಇಂತಹ ಸಂಸ್ಥೆಯ ಕೀರ್ತಿಯನ್ನು ಉಳಿಸಿ, ಬೆಳೆಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.

ನಾಳೆ ದಿನಾಂಕ 15 ಮತ್ತು 16 ರಂದು ಶ್ರೀಮಠದಿಂದ ನಡೆಯಲಿರುವ ಆರೋಗ್ಯ ತಪಾಸಣೆ ಶಿಬಿರ, ಪ್ರಶಸ್ತಿ ಪ್ರದಾನ ಸಮಾರಂಭ, ವೀರಮಾಹೇಶ್ವರರಿಗೆ ಶಿವದೀಕ್ಷೆ ಕಾರ್ಯಕ್ರಮಗಳು ಶ್ರೀ ರಂಭಾಪುರಿ ಜಗದ್ಗುರುಗಳ ಮಂಗಲ ಸಾನ್ನಿಧ್ಯದಲ್ಲಿ ನಡೆಯಲಿವೆ. 

ದಿನಾಂಕ 15 ರಂದು ಶ್ರೀಮಠದ ಆವರಣದಲ್ಲಿ ಎಸ್.ಸಿ.ಎಸ್. ಔಷಧ ಮಹಾವಿದ್ಯಾಲಯ (ಹರಪನಹಳ್ಳಿ)  ಹಾಗೂ ಎಸ್.ಎಸ್.ಐ.ಎಂ.ಎಸ್- ಸ್ವರ್ಶ್ ಮತ್ತು ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಉಚಿತ ಕೀಲು ಮೂಳೆ ತಪಾಸಣೆ ಮತ್ತು ಹೃದಯ ರೋಗ ತಪಾಸಣೆ ಶಿಬಿರ ನಡೆಯಲಿದೆ. 

ಈ ಸಂದರ್ಭದಲ್ಲಿ ಶ್ರೀ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ,  ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಟಿ.ಎಂ. ರಾಜಶೇಖರ್ ಇದ್ದರು.

error: Content is protected !!