ಪಡಿತರದಲ್ಲಿ ಸಣ್ಣ ಕಲ್ಲು-ಕಡ್ಡಿ, ಕಾಳುಗಳು ಮಿಶ್ರಿತ: ಆರೋಪ

ದಾವಣಗೆರೆ, ಡಿ.12- ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಬಿಪಿಎಲ್ ಕಾರ್ಡ್‌ದಾ ರರಿಗೆ ನ್ಯಾಯಬೆಲೆ ಅಂಗಡಿ ಗಳಲ್ಲಿ ತಿನ್ನಲು ಯೋಗ್ಯವಿಲ್ಲದ ಅಕ್ಕಿ, ಗೋಧಿ ಮತ್ತು ರಾಗಿ ವಿತರಿಸಲಾಗುತ್ತಿದೆ ಎಂಬ ದೂರುಗಳು ನಗರದಲ್ಲೀಗ ಕೇಳಿ ಬರುತ್ತಿವೆ.  ನ್ಯಾಯಬೆಲೆ ಅಂಗಡಿಯಲ್ಲಿ ನೀಡಲಾಗುವ ರಾಗಿಯಲ್ಲಿ ಕಡ್ಡಿಗಳು, ಬಳಕೆಗೆ ಯೋಗ್ಯವಿಲ್ಲದ ಜೋಳ, ಗೋಧಿಯ ಕಾಳುಗಳು ಕಾಣಸಿಗುತ್ತಿವೆ. ಈ ರೀತಿ ರಾಗಿಯದ್ದು ಒಂದು ರೀತಿಯಾದರೆ ಇನ್ನು ಅಕ್ಕಿಯಲ್ಲಂತೂ ಕಡ್ಡಿಗಳು, ಸಣ್ಣ ಸಣ್ಣ ಕಲ್ಲುಗಳು, ಹುಳುಗಳು ಇರುವುದಂತೂ ಸಾಮಾನ್ಯವಾಗಿದೆ. ಇನ್ನು ಗೋಧಿಯಲ್ಲೂ ಅಷ್ಟೆ. ಸಣ್ಣ ಸಣ್ಣ ಕಲ್ಲುಗಳು, ಕಡ್ಡಿಗಳಂತೂ ಯಥೇಚ್ಚವಾಗಿ ದೊರೆಯುತ್ತವೆ ಎಂಬ ಆರೋಪವನ್ನು ಸಾಕ್ಷಿ ಸಹಿತ ಮಾಡಲಾಗುತ್ತಿದೆ. 

ಒಂದು ಅಂದಾಜಿನ ಪ್ರಕಾರ 10 ಕೆಜಿ ಅಕ್ಕಿಯಲ್ಲಿ ಕನಿಷ್ಠ ಅರ್ಧ ಕೆಜಿಯಷ್ಟು ಕಡ್ಡಿ, ಸಣ್ಣ ಕಲ್ಲುಗಳು, ಹುಳುಗಳು ಕಂಡುಬರುತ್ತವೆ. ರಾಗಿಯಲ್ಲಂತೂ ನ್ಯಾಯಬೆಲೆ ಅಂಗಡಿಯಲ್ಲಿ ಇರುವ ಕಸವೆಲ್ಲವೂ ಅದರಲ್ಲೇ ಇರುತ್ತದೆ. 10 ಕೆಜಿಗೆ ಕನಿಷ್ಟ 1 ಕೆಜಿಯಷ್ಟು ತ್ಯಾಜ್ಯವೇ ಇದರಲ್ಲಿ ಇರುತ್ತದೆ. ಇದೇ ರೀತಿ ಗೋಧಿಯಲ್ಲೂ ಸಹ ಸಾಕಷ್ಟು ಕಡ್ಡಿ, ಸಣ್ಣ ಕಲ್ಲುಗಳಂತೂ ಸರ್ವೇ ಸಾಮಾನ್ಯ ಎಂಬ ದೂರುಗಳಿವೆ.

error: Content is protected !!