ದಾವಣಗೆರೆ, ಡಿ.12- ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ದೇಶದ ಮೊದಲ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಇತರೆ ರಕ್ಷಣಾ ಸಿಬ್ಬಂದಿಗಳ ಆತ್ಮಕ್ಕೆ ಶಾಂತಿ ಕೋರಿ ರೋಟರಿ ಕ್ಲಬ್ ದಾವಣಗೆರೆ ದಕ್ಷಿಣ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕ್ಲಬ್ ಅಧ್ಯಕ್ಷ ಡಾ. ಸುಜಿತ್ ಕುಮಾರ್, ಅಸಿಸ್ಟೆಂಟ್ ಗೌರ್ನರ್ ಬದ್ರಿನಾಥ್, ಪಿಡಿಜಿ ನಯನ್ ಪಾಟೀಲ್, ಖಜಾಂಚಿ ಡಾ. ಹಾಲಸ್ವಾಮಿ ಕಂಬಾಳಿಮಠ್, ವಿಶ್ವಜಿತ್ ಜಾಧವ್, ಬಸವರಾಜ್, ರಂಗಪ್ಪ. ಸಿ. ಕೆ., ನಾಗರಾಜ್ ಜಾಧವ್, ವಿಶಾಲ್ ಸಂಘವಿ, ಗಜಾನನ ಭೂತೆ, ಜ್ಞಾನೇಶ್ವರ್ ನವಲೆ ಉಪಸ್ಥಿತರಿದ್ದರು.