ದಾವಣಗೆರೆ, ಡಿ.12 – ನಗರದ 16 ನೇ ವಾರ್ಡ್‍ನ ವಿನೋಬನಗರದ 83, 84 ನೇ ಬೂತ್‍ನಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಉತ್ತರ ವಲಯದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ವೀಕ್ಷಕರಾದ ಸೈಯದ್ ಅಹ್ಮದ್, ವಿಜಯಕುಮಾರ್, ಎಂಎಲ್‍ಸಿ ಮೋಹನ್ ಕೊಂಡಜ್ಜಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ವಿನೋಬನಗರದ ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಅವರ ಸದಸ್ಯತ್ವವನ್ನು ಪಡೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಾರ್ಡಿನ ಮುಖಂಡರಾದ ಸುರೇಶ್ ಉತ್ತಂಗಿ, ಹೆಚ್. ಸುರೇಶ್, ಎಸ್. ರವಿ, ಸತೀಶ್, ರಮೇಶ್, ವೀರಣ್ಣ, ಬಸವರಾಜಪ್ಪ, ಶಾರದಮ್ಮ, ಮಂಜುನಾಥ್, ಹರೀಶ್ ಬಸಾಪುರ, ಯುವರಾಜ್ ಇನ್ನು ಮುಂತಾದವರಿದ್ದರು