ಎಸ್. ನಿಜಲಿಂಗಪ್ಪನವರ ಜನ್ಮ ದಿನಾಚರಣೆ

ದಾವಣಗೆರೆ, ಡಿ.10- ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ 119ನೇ ಜನ್ಮದಿನದ ಅಂಗವಾಗಿ ನಗರದ ಎಸ್.ನಿಜಲಿಂಗಪ್ಪ ಬಡಾವ ಣೆಯ ವರ್ತುಲ ರಸ್ತೆಯಲ್ಲಿರುವ ಗಡಿಯಾರ ಕಂಬದ ಬಳಿಯ ಉದ್ಯಾನವನದಲ್ಲಿರುವ ಎಸ್.ನಿಜಲಿಂಗಪ್ಪ ಅಭಿಮಾನಿ ಬಳಗದಿಂದ ಎಸ್ಸೆನ್ ಪ್ರತಿಮೆಗೆ ಇಂದು ಮಾಲಾರ್ಪಣೆ ಮಾಡುವುದರ ಮೂಲಕ ಎಸ್ಸೆನ್ ಹುಟ್ಟುಹಬ್ಬ ಆಚರಿಸಲಾಯಿತು.

ಬಳಗದವರಾದ ನಗರ ಪಾಲಿಕೆ ಮಾಜಿ ಉಪ ಮೇಯರ್ ಬಿ.ಲೋಕೇಶ್, ನಗರ ಪಾಲಿಕೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಳ್ಳಿ ರಮೇಶ್, ದೇವಿಗೆರೆ ಪ್ರಭಾಕರ್, ಎಸ್.ಜಿ.ಉಳುವಯ್ಯ, ಬಿ.ವೆಂಕಟೇಶ್, ಕಂಚಿಕೆರೆ ಮಹೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!