ಮುರುಘಾ ಪರಂಪರೆ ಮುಂದುವರಿಕೆಯೇ ನಾವು ಅದಕ್ಕೆ ಸಲ್ಲಿಸುವ ಗೌರವ: ಶರಣರು

ಚಿತ್ರದುರ್ಗ, ಡಿ. 9- ನಾವೆಲ್ಲ ಬರಿಗೈಲಿ ಬಂದವರು. ಮುರುಘಾ ಪರಂಪರೆಯು ನಮ್ಮ ನಿಮ್ಮ ಬದುಕನ್ನು ಕಟ್ಟಿಕೊಟ್ಟಿದೆ. ಪರಂಪರೆಯ ಮುಂದುವರಿ ಕೆಯೇ ನಾವು ಅದಕ್ಕೆ ಸಲ್ಲಿಸುವ ಗೌರವ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೊನ್ನೆ ನಡೆದ ಮುರುಘಾ ಪರಂ ಪರೆಯ ಮಠಾಧೀಶರ ಸಮಾಗಮ, ಮಠಗಳ ನಿರ್ವ ಹಣೆ ಹಾಗೂ ಬಸವ ಕೇಂದ್ರಗಳ ಸ್ಥಾಪನೆ ಕುರಿತ ಸಮಾರಂಭದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಶರಣ ತತ್ವಯುಕ್ತ ಮುರುಘಾ ಪರಂಪರೆಯು ಒಂದು ವಿಶಾಲವಾದ ಛತ್ರಿ. ಮರದ ನೆರಳಲ್ಲಿದ್ದು, ತನ್ನ ನೆರಳನರಸುವರೆ? ಎನ್ನುವ ಬಸವ ವಾಣಿಯಂತೆ ನಡೆದುಕೊಳ್ಳಬೇಕಿದೆ. ಮುರುಘಾ ಪರಂಪರೆಗೆ ಸೇರಿದ ಮಠಗಳಿಗೆ ಕೆಲವರು ಸ್ವಾಮಿಗಳಾಗಿದ್ದು, ತಮ್ಮದು ಸ್ವತಂತ್ರ ಮಠವೆಂದು ಭಾವಿಸುತ್ತಾರೆ. ಸಂಪರ್ಕದ ಕೊರತೆಯಿಂದಲೋ ಅಥವಾ ಅವಜ್ಞೆಯಿಂದಲೋ ಕೆಲವರು ಮುರುಘಾ ಪರಂಪರೆಯನ್ನು ಅಲಕ್ಷಿಸುತ್ತಾರೆ.

ಕೆಲವರಿಗೆ ಮುರುಘಾ ಸಂಪ್ರದಾಯದ ಶಾಖಾ ಮಠ ಬೇಕು. ಆದರೆ ಮುರುಘಾ ಪರಂಪರೆ ಬೇಡ. ಇಂಥವರು ಆಸ್ತಿಕೇಂದ್ರಿತ ಮಠಾಧೀಶರೆನಿಸಿಕೊಳ್ಳು ತ್ತಾರೆ. ಆದರ್ಶ ಕೇಂದ್ರಿತ ಮಠಾಧೀಶರೆನಿಸಿಕೊಳ್ಳು ವುದು ಮುಖ್ಯ. 

ಮುರುಘಾ ಪರಂಪರೆಗೆ ಸೇರಿದ ಶಾಖಾಮಠಗಳಿಗೆ ಕೆಲವರು ಮೂಲಮಠದ ಪರವಾ ನಿಗೆ ಇಲ್ಲದೆ ನೇಮಕಗೊಂಡಿದ್ದಾರೆ. ಆಯಾಯ ಊರಿನ ಜನರಿಗೆ (ಭಕ್ತರಿಗೆ) ಪರಂಪರೆಯ ಅರಿವು ಇಲ್ಲದಿರಬ ಹುದು; ಅಥವಾ ಉತ್ತರಾಧಿಕಾರಿಯನ್ನು ನಿಯೋಜಿಸು ವಾಗ ಮೂಲಮಠದ ಪರವಾನಿಗೆ ಪಡೆಯದಿರಬ ಹುದು. ಕೆಲವರು ಇದರ ಲಾಭವನ್ನು ಪಡೆದಂತೆ ಕಾಣಿ ಸುತ್ತದೆ. ಮುರುಘಾ ಪರಂಪರೆಯ ಶಾಖಾ ಮಠಗಳ ಅಳಿವಿಗೆ ಇದು ಒಂದು ಕಾರಣವಾಗಿದೆ ಎಂದು ಹೇಳಿದರು.

ಈ ಪರಂಪರೆಗೆ ಸೇರಿದ ಯಾವ ಮಠಗಳಿಗಾದರೂ ಸ್ವಾಮಿಗಳಾಗಲಿ, ತೊಂದರೆಯಿಲ್ಲ. ಮೂಲಮಠದೊಂದಿಗೆ ಒಂದಿಷ್ಟು ಸಂಪರ್ಕ, ಸೈದ್ಧಾಂತಿಕ ಸ್ಪಷ್ಟತೆ ಇರಲಿ. 

ಸ್ವಾಮಿಗಳಾಗುವುದು ದೊಡ್ಡ ಸಾಧನೆ ಅಲ್ಲ. ಸ್ವಾಮಿಗಳಾಗಿ ಯಾವ ಸಾಧನೆ ಮಾಡಲಾಯಿತು? ಎಂಬುದು ಮುಖ್ಯ. ಇಲ್ಲದಿದ್ದರೆ ಅಂಥವರನ್ನು ಕಾಲ ಕ್ಷಮಿಸುವುದಿಲ್ಲ ಎಂದರು.

ಮುಪ್ಪಾವಸ್ಥೆಯಲ್ಲಿ ತಮ್ಮ ರಕ್ತಸಂಬಂಧಿಗಳನ್ನು ಉತ್ತರಾಧಿಕಾರಿಗಳನ್ನಾಗಿ ಸ್ವೀಕರಿಸುವುದು ಪರಂ ಪರೆಯ ಅಳಿವಿಗೆ 2ನೇ ಕಾರಣವಾಗಿದೆ. ಸಂಬಂಧಿಕರು ಸೇರುತ್ತಾ ಹೋದಂತೆ ಅದು ಮುಂದೆ ಒಂದು ಕುಟುಂ ಬದ ಆಸ್ತಿ ಆಗಿಬಿಡುತ್ತದೆ ಎಂದು ಎಚ್ಚರಿಸಿದರು.

ತಾವು ಗಟ್ಟಿಯಿರುವಾಗಲೆ ಓರ್ವ ಯುವಕನನ್ನು (ಧಾರ್ಮಿಕ ಆಸಕ್ತಿಯಿರುವ) ಆಯ್ಕೆ ಮಾಡಿ ಬಸವ ತತ್ವ ಅಥವಾ ಶರಣ ತತ್ವವನ್ನು ಅಧ್ಯಯನ ಮಾಡಿಸುವುದು. ಜತೆಗೆ 2-3 ಭಾಷೆಗಳಲ್ಲಿ ಪರಿಣಿತನನ್ನಾಗಿಸುವುದು ಎಲ್ಲ ಮಠಾಧೀಶರ ಆದ್ಯ ಕರ್ತವ್ಯ. 

ರಕ್ತಸಂಬಂಧಗಳ ಪೈಕಿ ಉತ್ತರಾಧಿಕಾರಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದರೆ ತೊಂದರೆಯಿಲ್ಲ; ರಕ್ತ ಸಂಬಂಧವೇ ಅರ್ಹತೆ ಆಗದೆ, ಆತನಲ್ಲಿನ ಪ್ರತಿಭೆ- ಧಾರ್ಮಿಕ – ಸಾಮಾಜಿಕ ಕಳಕಳಿ – ಸೇವಾ ಮನೋಭಾವನೆ  ಇತ್ಯಾದಿ ಮಾನದಂಡವಾಗಬೇಕು. ಅಂಥವರನ್ನು ಬಸವ ತತ್ವ ಪ್ರಣೀತ ಶೂನ್ಯಪೀಠಕ್ಕೆ (ಚಿತ್ರದುರ್ಗ) ಕಳುಹಿಸಿ ಸೂಕ್ತ ಶಿಕ್ಷಣ, ತರಬೇತಿ ಮತ್ತು ಮಾರ್ಗದರ್ಶನ ನೀಡು(ಡಿಸು)ತ್ತ ಯೋಗ್ಯ ಸ್ವಾಮಿಗಳನ್ನಾಗಿ ರೂಪಿಸಬೇಕಾಗುತ್ತದೆ. ಕೆಲ ಮಠಾಧೀಶರ ಇಂಥ ನಿರ್ಧಾರಗಳಿಗೆ ಶ್ರೀಮಠ ಬೆಂಬಲಿಸಿದೆ. ಶಾಖಾಮಠ ಮತ್ತು ಮೂಲಮಠದ ನಡುವೆ ಒಪ್ಪಂದವಾಗಿದ್ದು, ತಮ್ಮ ಮರಿಗಳನ್ನು ಶ್ರೀಮಠಕ್ಕೆ ಅಧ್ಯಯನ ಮಾಡಲು ಕಳಿಸಿಕೊಟ್ಟಿರುತ್ತಾರೆ. ಇಂಥ ಉದಾಹರಣೆಗಳು ಹೆಚ್ಚಾಗಬೇಕು ಎಂದರು.

ಕೊಳದಮಠದ ಡಾ. ಶ್ರೀ ಶಾಂತವೀರ ಸ್ವಾಮಿಗಳು ಮಾತನಾಡಿ, ನಮ್ಮ ಮಠಗಳಿಗೆ ತಂದೆ-ತಾಯಿ, ಮೂಲಮಠ ಎಂದರೆ ಚಿತ್ರದುರ್ಗದ ಮುರುಘಾ ಮಠ. ಶಾಖಾಮಠಗಳ ಯೋಗಕ್ಷೇಮವನ್ನು ಮೂಲಮಠ ಗಮನಿಸಬೇಕು.  ಉತ್ತರಾಧಿಕಾರಿ ಆಯ್ಕೆಯಲ್ಲಿ ಸಂಸ್ಕಾರ ಬುದ್ಧಿ ಬರಬೇಕು. ಅವರನ್ನು ಮುರುಘಾ ಪರಂಪರೆಗೆ ಕೊಂಡೊಯ್ಯಬೇಕು. ನಮ್ಮ ಪರಂಪರೆ ಉಳಿಸಬೇಕು. ಬೆಂಗಳೂರಿನಲ್ಲಿರುವ ಎಲ್ಲವೂ ವಿರಕ್ತಮಠಗಳು. ಇಲ್ಲವಾದರೆ ಕಾನೂನಾತ್ಮಕವಾಗಿ ಸಾಗಬೇಕೆಂದರು.

ಸಂಶೋಧಕ ಡಾ. ಬಿ. ರಾಜಶೇಖರಪ್ಪ, ಹೊಳೆ ಇಟಗಿಯ ಶ್ರೀ ಮಡಿವಾಳೇಶ್ವರ ಸ್ವಾಮೀಜಿ, ಬನವಾಸಿಯ ಶ್ರೀ ನಾಗಭೂಷಣ ಸ್ವಾಮೀಜಿ, ಗುರುಮಿಠಕಲ್ ಮುರುಘಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಳ್ಳಾರಿ ಕಲ್ಯಾಣಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಶರಣ ಸಾಹಿತಿ ರಂಜಾನ್ ದರ್ಗಾ, ಶಿಗ್ಗಾವಿಯ ಶ್ರೀ ಸಂಗನಬಸವ ಸ್ವಾಮೀಜಿ, ಕಲಬುರ್ಗಿಯ ಶ್ರೀ ಬಸವ ಕಬೀರ ಸ್ವಾಮೀಜಿ ಹಾಗು ಇತರರು ಉಪಸ್ಥಿತರಿದ್ದು ಮಾತನಾಡಿ ಮುರುಘಾ ಶರಣರ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದರು.

error: Content is protected !!