ಟೆನ್ನಿಸ್ ಸಿಂಥೆಟಿಕ್ ಕೋರ್ಟ್‌ಗೆ ಹೆಚ್ಚಿನ ಸೌಲಭ್ಯ : ಸಚಿವ ಅಶೋಕ್‌

ದಾವಣಗೆರೆ, ಸೆ.19- ಬೆಂಗಳೂರು ಹೊರತು ಪಡಿಸಿದರೆ ದಾವಣಗೆರೆ ಟೆನ್ನಿಸ್ ಹಬ್ ಆಗಿದ್ದು, ಇಲ್ಲಿ ನಾಲ್ಕು ಟೆನ್ನಿಸ್ ಸಿಂಥೆಟಿಕ್ ಕೋರ್ಟ್‌ಗಳಿವೆ. ಇವುಗಳಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಕಂದಾಯ ಸಚಿವ ಹಾಗೂ ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಅಶೋಕ್ ಭರವಸೆ ನೀಡಿದರು.

ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿರುವ ಟೆನ್ನಿಸ್ ಸಿಂಥೆಟಿಕ್ ಕೋರ್ಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೆನ್ನಿಸ್ ಪಂದ್ಯಾವಳಿ ನಡೆಸಲುದ್ದೇಶಿಸಿರುವ ಹಿನ್ನೆಲೆಯಲ್ಲಿ ಕ್ರೀಡಾ ಸಚಿವ ನಾರಾಯಣಗೌಡ ಅವರೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಬೆಂಗಳೂರು ಹೊರತು ಪಡಿಸಿದರೆ ದಾವಣಗೆರೆ ಟೆನ್ನಿಸ್ ಹಬ್ ಆಗಿದ್ದು, ಇಲ್ಲಿ ನಾಲ್ಕು ಟೆನ್ನಿಸ್ ಸಿಂಥೆಟಿಕ್ ಕೋರ್ಟ್‌ಗಳಿವೆ. ಇವುಗಳಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಲು ಡಿಸಿ ಜೊತೆ ಮಾತನಾಡುತ್ತೇನೆ ಎಂದರು.

ಬಳ್ಳಾರಿ, ಗದಗ ಸೇರಿದಂತೆ ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಟೆನ್ನಿಸ್ ಕೋರ್ಟ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಶಾಲಾ-ಕಾಲೇಜು ಮಕ್ಕಳು ಮತ್ತು ಯುವಜನರಲ್ಲಿ ಟೆನ್ನಿಸ್ ಅಭಿರುಚಿ ಬೆಳೆಸಲಾಗುವುದು ಎಂದು ಅವರು ತಿಳಿಸಿದರು.

ಓಲಿಂಪಿಕ್ ಹಾಗೂ ಏಷಿಯನ್ ಗೇಮ್ಸ್ ಗಳಗಾಗಿ ಐದು ವರ್ಷಗಳ ಮೊದಲೇ ಕ್ರೀಡಾಪಟುಗಳಿಗೆ ತರಬೇತಿ ನೀಡಿ, ಅವರನ್ನು ಹುರಿದುಂಬಿಸಿ ಕಳುಹಿಸಿಕೊಡಲಾಗುವುದು. ಇದರಿಂದ ನಮ್ಮ ಕ್ರೀಡಾಪಟುಗಳು ಹೆಚ್ಚಿನ ಪದಕ ಗೆದ್ದುಕೊಂಡು ಬರಲು ಉತ್ತೇಜನ ನೀಡಿದಂತಾಗಲಿದೆ ಎಂದು ಹೇಳಿದರು.

ಕ್ರೀಡಾ ಸಚಿವ ನಾರಾಯಣ ಗೌಡ, ಉಪ ವಿಭಾಗಾ ಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಗಿರೀಶ್, ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್‌ನ ಕಾರ್ಯಕಾರಿ ಅಧ್ಯಕ್ಷ ಡಾ.ಎಸ್.ಎಂ. ಬ್ಯಾಡಗಿ, ಕಾರ್ಯದರ್ಶಿ ಕೆ.ಪಿ.ಚಂದ್ರಪ್ಪ, ಜಂಟಿ ಕಾರ್ಯದರ್ಶಿಗಳಾದ ಡಾ.ಎಚ್.ಎಲ್.ಸುಬ್ಬರಾವ್, ರಘುನಂದನ್ ಜೆ. ಅಂಬರ್‌ಕರ್, ನಿರ್ದೇಶಕರುಗಳಾದ ಸಿ.ಎಸ್.ಮೂರ್ತಿ, ನಂದಗೋ ಪಾಲ್, ಆರ್.ಎಸ್.ವಿಜಯಾನಂದ, ಅನಿಲ್ ಐ.ಎಂ, ಎಚ್.ವಿ.ರುದ್ರೇಶ್ ಮತ್ತಿತರರು ಹಾಜರಿದ್ದರು.

error: Content is protected !!