ದಾವಣಗೆರೆ, ಸೆ.15- ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್.ಕೆ.ಸಿ.ಸಿ.ಐ) ಕೊಡಮಾಡುವ 2021ನೇ ಸಾಲಿನ ಟ್ರೇಡ್ ಎಕ್ಸ್ಲೆನ್ಸ್ ಅವಾರ್ಡ್ ಪ್ರಶಸ್ತಿ ನಗರದ ರಜ್ವಿ ಟ್ರೇಡರ್ಸ್ನ ಮಾಲೀಕ ಕೆ.ಜಾವೀದ್ ಸಾಬ್ ಮತ್ತು ಕೆ.ಜೆ. ಹೊಂಡೈ ಮಾಲೀಕ ಕೆ.ಜೆ.ಅಫಾಕ್ ರಜ್ವಿ ಅವರಿಗೆ ದೊರೆತಿದೆ.
ಬೆಂಗಳೂರಿನ ಫೆಡರೇಷನ್ ಹೌಸ್ನಲ್ಲಿರುವ ಸರ್ ಎಂ.ವಿ. ಆಡಿಟೋರಿಯಂನಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಭಗವಂತ ಕೂಬಾ ಮತ್ತು ಪೇರಿಕಲ್ ಎಂ.ಸುಂದರ್ ಇವರು ಪ್ರಶಸ್ತಿ ಪ್ರದಾನ ಮಾಡಿದರು. ಜಾವೀದ್ ಸಾಬ್ ಹಾಗೂ ಕೆ.ಜೆ.ಅಫಾಕ್ ರಜ್ವಿ ಅವರುಗಳು ಹೊಂಡೈ ಕಾರುಗಳ ಮಾರಾಟಗಾರರಷ್ಟೇ ಅಲ್ಲದೇ, ಭತ್ತ ಹಾಗೂ ಮೆಕ್ಕೆಜೋಳದ ವ್ಯಾಪಾರಿಯೂ ಆಗಿದ್ದಾರೆ.