ವಿ.ಪ ಚುನಾವಣೆ : ನವೀನ್ ಗೆಲುವು ಸೂರ್ಯನಷ್ಟೇ ಸತ್ಯ

ಕೊಮಾರನಹಳ್ಳಿ : ಗ್ರಾ.ಪಂ. ಸದಸ್ಯರ ಸಭೆಯಲ್ಲಿ ಸಂಸದ ಸಿದ್ದೇಶ್ವರ ವಿಶ್ವಾಸ

ಯಾರು ಎಷ್ಟೇ ದುಡ್ಡು ಕೊಟ್ರೂ ತಗೊಂಡು  ಗ್ರಾ.ಪಂ.ಗಳ ಅಭಿವೃದ್ಧಿ ದೃಷ್ಟಿಯಿಂದ ನವೀನ್ ಅವರಿಗೆ ಮತ ನೀಡಿ ಗೆಲ್ಲಿಸಬೇಕು. 

– ಬಿ.ಪಿ. ಹರೀಶ್, ಮಾಜಿ ಶಾಸಕ

ಮಲೇಬೆನ್ನೂರು, ಡಿ.5- ವಿಧಾನ ಪರಿಷತ್ ಚುನಾವಣೆಯಲ್ಲಿ 2 ಬಾರಿ ಸೋತಿರುವ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಈ ಬಾರಿ ಅಧಿಕ ಮತಗಳಿಂದ ಆಯ್ಕೆಯಾಗುವುದು ಸೂರ್ಯನಷ್ಟೇ ಸತ್ಯ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಕೊಮಾರನಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಭಾನುವಳ್ಳಿ ಜಿ.ಪಂ. ವ್ಯಾಪ್ತಿಯ ಹಾಲಿವಾಣ, ಹರಳಹಳ್ಳಿ, ಕುಂಬಳೂರು, ದೇವರಬೆಳಕೆರೆ ಮತ್ತು ಭಾನು ವಳ್ಳಿ ಗ್ರಾ.ಪಂ. ಸದಸ್ಯರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

ಕಳೆದ 2 ಬಾರಿ ಗೆದ್ದಿರುವ ರಘು ಆಚಾರ್ ಅವರು ಒಮ್ಮೆಯೂ ನಿಮ್ಮ ಗ್ರಾ.ಪಂ. ಗಳಿಗೆ ಭೇಟಿ ನೀಡದೆ, 12 ವರ್ಷ ಬೆಂಗಳೂರಿನಲ್ಲಿಯೇ ಕಾಲ ಕಳೆದಿದ್ದಾರೆ. ಈಗ ಬಂದಿರುವ ಸೋಮ ಶೇಖರ್ ಕೂಡಾ ಬೆಂಗಳೂರಿನವರಾಗಿದ್ದು, ಅವರನ್ನು ಗೆಲ್ಲಿಸಿದರೆ ಬೆಂಗಳೂರು ಸೇರಿಕೊಳ್ಳು ತ್ತಾರೆ. ನವೀನ್ ಅವರು ಸೋತಿದ್ದರೂ ಬಿಜೆಪಿ ಯಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.  ಜೊತೆಗೆ ನವೀನ್ ಭಾನುವಳ್ಳಿ ಗ್ರಾಮದ ಮೊಮ್ಮ ಗನಾಗಿದ್ದು, ಈ ಬಾರಿ ಹರಿಹರ ತಾಲ್ಲೂಕಿನಲ್ಲಿ ಹೆಚ್ಚು ಮತಗಳು ಲಭಿಸುವ ಮೂಲಕ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಸಿದ್ದೇಶ್ವರ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಅಭ್ಯರ್ಥಿ ಕೆ.ಎಸ್.ನವೀನ್ ಮಾತನಾಡಿದರು.

ಜಿ.ಪಂ ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಬಿಜೆಪಿ ಮುಖಂಡ ಎಲ್.ಎನ್.ಕಲ್ಲೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಬಿ.ಎಸ್.ಜಗದೀಶ್, ಬಾತಿ ಚಂದ್ರ ಶೇಖರ್, ತಾಲ್ಲೂಕು  ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಹಾಲಿ ವಾಣ ಗ್ರಾ.ಪಂ. ಅಧ್ಯಕ್ಷ ಐ.ಪಿ.ರಂಗನಾಥ್, ಕುಂಬಳೂರು ಗ್ರಾ.ಪಂ. ಅಧ್ಯಕ್ಷರಾದ ಲೀಲಾ ಶಿವಕುಮಾರ್, ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾದ ನೇತ್ರಾವತಿ ಕೊಟ್ರೇಶ್, ದೇವರಬೆಳಕೆರೆ ಗ್ರಾ.ಪಂ. ಅಧ್ಯಕ್ಷರಾದ ಗೀತಾ ಪರಶುರಾಮ್, ದಿಶಾ ಕಮಿಟಿ ಸದಸ್ಯರಾದ ಐರಣಿ ಅಣ್ಣಪ್ಪ, ತಾ.ಪಂ. ಮಾಜಿ ಸದಸ್ಯ ಗುಳದಹಳ್ಳಿ ಮಾಲತೇಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಐರಣಿ ಮಹೇಶ್ವರಪ್ಪ, ತಾ. ಕಾರ್ಯದರ್ಶಿಗಳಾದ ಆದಾಪುರ ವೀರೇಶ್, ಹುಗ್ಗಿ ಮಹಾಂತೇಶ್, ಮುಖಂಡ ರಾದ ಹಾಲಿವಾಣದ ಮಲ್ಲೇಶಪ್ಪ, ದಿಬ್ದಹಳ್ಳಿ ಓಂಕಾರಪ್ಪ, ಭಾನುವಳ್ಳಿ ಕೊಟ್ರೇಶಪ್ಪ, ಎ.ಕೆ.ಮಂಜಪ್ಪ, ಮೋಹನ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!