ಮಾಸ್ಕ್ ಧರಿಸದವರಿಗೆ ದಂಡ : ಡಿಸಿ ಬೀಳಗಿ

ಕೊರೊನಾ ಚಿಕಿತ್ಸಾ ಸೌಲಭ್ಯಗಳ ಪರಿಶೀಲನೆ

ದಾವಣಗೆರೆ, ಡಿ. 3 – ಕೊರೊನಾದ ಓಮಿಕ್ರಾನ್ ರೂಪಾಂತರಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗು ವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ರೂಪಾಂತರಿ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ನಂತರ ಹೇಳಿಕೆ ನೀಡಿ ರುವ ಅವರು, ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸದವ ರಿಗೆ ಪಾಲಿಕೆ ಪ್ರದೇಶದಲ್ಲಿ 250 ರೂ. ಹಾಗೂ ತಾಲ್ಲೂಕು ಹಂತದಲ್ಲಿ 150 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗುವುದು ಎಂದಿರುವ ಜಿಲ್ಲಾಧಿಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಜನಜಂಗುಳಿ ನಿಯಂತ್ರಿಸಲಾಗುವುದು ಎಂದಿದ್ದಾರೆ.

ಕಳೆದ ಎರಡು ಕೊರೊನಾ ಅಲೆ ಗಳನ್ನು ನಿಭಾಯಿಸಿರುವ ಅನುಭವ ಬಳಸಿಕೊಂಡು, ಓಮಿಕ್ರಾನ್ ತಡೆ ಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೀಳಗಿ ಹೇಳಿದ್ದಾರೆ.

ಸಿ.ಜೆ. ಆಸ್ಪತ್ರೆಯಲ್ಲಿ ಬೆಡ್‌ಗಳ ಸಾಮರ್ಥ್ಯ, ವೆಂಟಿಲೇಟರ್‌, ಆಕ್ಸಿಜನ್ ಬೆಡ್, ಆಕ್ಸಿಜನ್ ಘಟಕ ಹಾಗೂ ಮಾನವ ಸಂಪನ್ಮೂಲದ ಬಗ್ಗೆ ಬೀಳಗಿ ಮಾಹಿತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಸಿ.ಜಿ.ಆಸ್ಪತ್ರೆಯ ಅಧೀಕ್ಷಕ ಡಾ.ಜಯಪ್ರಕಾಶ್ ಮತ್ತಿತರೆ ವೈದ್ಯರು ಉಪಸ್ಥಿತರಿದ್ದರು.

error: Content is protected !!