ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆ ಪ್ರಶಂಸನೀಯ

ಆಫೀಸರ್ಸ್ ವೈಫ್ಸ್ ಕ್ಲಬ್ ಅಧ್ಯಕ್ಷರಾದ ರೇಖಾ ಮಹಾಂತೇಶ ಬೀಳಗಿ

ದಾವಣಗೆರೆ, ಡಿ.2- ಕ್ರಿಷ್ ಕ್ರಿಯೇಷನ್ (ಬೆಂಗಳೂರು) ಹಾಗೂ ಸ್ಥಳೀಯ ಎಂ.ಸಿ.ಸಿ. `ಬಿ’ ಬ್ಲಾಕ್‌ ಸ್ನೇಹ ಮಹಿಳಾ ಬಳಗದ ಸಹಯೋಗದೊಂದಿಗೆ ನಗರದ ಶ್ರೀ ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದಲ್ಲಿ ವಸ್ತ್ರಗಳು, ಗೃಹೋಪಯೋಗಿ ವಸ್ತುಗಳು ಹಾಗೂ  ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಗುರುವಾರ ಏರ್ಪಡಿಸಲಾಗಿತ್ತು.

ಆಫೀಸರ್ಸ್ ವೈಫ್ಸ್ ಕ್ಲಬ್‌ನ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಗಳ ಧರ್ಮಪತ್ನಿ ಶ್ರೀಮತಿ ರೇಖಾ ಮಹಾಂತೇಶ ಬೀಳಗಿ ಹಾಗೂ ಉಪಾಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಸಿಇಒರವರ  ಧರ್ಮಪತ್ನಿ ಶ್ರೀಮತಿ ಡಾ.ಶ್ವೇತಾ ದೀಪ ಬೆಳಗಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೇಖಾ ಮಹಾಂತೇಶ ಬೀಳಗಿ, ಮಹಿಳೆಯರು ಸಂಸಾರವನ್ನು ನಿಭಾಯಿಸುವುದರ ಜೊತೆಗೆ ಸಾರ್ವಜನಿಕ ಕ್ಷೇತ್ರಗ ಳಲ್ಲೂ ಗುರುತಿಸಿಕೊಳ್ಳುತ್ತಾ, ಇಂತಹ ಚಟುವಟಿಕೆಗ ಳನ್ನು ಹಮ್ಮಿಕೊಂಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಡಾ.ಶ್ವೇತಾ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು. ದಾವಣಗೆರೆಯಲ್ಲಿ ಮಹಿಳಾ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ. ಸ್ನೇಹ ಮಹಿಳಾ ಬಳಗ ಅನೇಕರನ್ನು ಒಗ್ಗೂಡಿಸಿ ಉತ್ತಮ ಕಾರ್ಯ ಚಟುವಟಿಕೆ ನಡೆಸುತ್ತಿದೆ ಎಂದು ಪ್ರಶಂಸಿಸಿದರು.

ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿ ಕೊಳ್ಳುವ ಜೊತೆಗೆ ಕುಟುಂಬದವರ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಸದೃಢಳಾಗಬೇಕು ಎಂದು ಕರೆ ನೀಡಿದರು.

ಸ್ನೇಹ ಮಹಿಳಾ ಬಳಗದ ಗೌರವ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಸವಲಿಂಗಪ್ಪ ಮಾತನಾಡಿ, `ಉದ್ಯೋಗಂ ಪುರುಷ ಲಕ್ಷ್ಮಣಂ’ ಎನ್ನುವ ಗಾದೆ ಬದಲಾಗಿ ಈಗ `ಉದ್ಯೋಗಂ ಸ್ತ್ರೀ ಲಕ್ಷಣಂ’ ಎನ್ನುವಂತಾಗಿದೆ. ಮಹಿಳೆಯರಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಮುಖ್ಯ. ಈ ನಿಟ್ಟಿನಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಾಕರ ನೀಡುವಲ್ಲಿ ಸ್ನೇಹ ಬಳಗ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಸಹಕಾರ ನೀಡುತ್ತಾ ಬಂದಿದೆ ಎಂದು ಹೇಳಿದರು.

ಅಧ್ಯಕ್ಷರಾದ ಶ್ರೀಮತಿ ಮಂಜುಳ ನಿಂಗಪ್ಪ, ಕ್ರಿಷ್ ಕ್ರಿಯೇಷನ್ಸ್  ಮುಖ್ಯಸ್ಥರಾದ ಶ್ರೀಮತಿ ಇಂದುಮತಿ ನವೀನ್, ಸ್ನೇಹ ಮಹಿಳಾ ಬಳಗದ ಕಾರ್ಯದರ್ಶಿ ಭಾನುಮತಿ ಶಶಿಧರ, ಸುವರ್ಣ ದೊಗ್ಗಳ್ಳಿ, ಚೇತನ ಲಿಂಗರಾಜು, ಕವಿತ, ಪುಷ್ಪ, ಅನ್ನಪೂರ್ಣ, ನೇತ್ರ, ರೇಖಾ, ತುಳಸಿ, ಪುಣ್ಯ ಮಂಜುನಾಥ್ ಇತರರು ಉಪಸ್ಥಿತರಿದ್ದರು.

error: Content is protected !!