ದಾವಣಗೆರೆ, ಸೆ. 8- ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ, ಹಿರಿಯ ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದಿಂದ `ಗೌರವ ಡಾಕ್ಟರೇಟ್’ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ನಿರಂಜನ್ ವಿ. ನಿಷ್ಟಿ ತಿಳಿಸಿದ್ದಾರೆ.
ನಾಡಿದ್ದು ದಿನಾಂಕ 10ರ ಶುಕ್ರವಾರ ಗುಲ್ಬರ್ಗಾದ ಶರಣಬಸವ ವಿಶ್ವವಿದ್ಯಾಲಯದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಎಸ್ಸೆಸ್ ಅವರಿಗೆ ವಿವಿಯ ಕುಲಾಧಿಪತಿಗಳಾದ ಡಾ. ಶರಣಬಸವಪ್ಪ
ಅಪ್ಪಾ ಅವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದ್ದಾರೆ.
ಕಳೆದ ಜುಲೈ 30ರಂದು ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ಸಭೆಯಲ್ಲಿ ಎಸ್ಸೆಸ್ ಅವರ ಶಿಕ್ಷಣ, ಸಮಾಜ ಸೇವೆಯನ್ನು ಗುರುತಿಸಿ, ವಿಶ್ವವಿದ್ಯಾಲಯದ ಪ್ರಥಮ ಮತ್ತು ದ್ವಿತೀಯ ಘಟೀಕೋತ್ಸವದಲ್ಲಿ ಈ ಪದವಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಘಟಿಕೋತ್ಸವದ ಸಮಾರಂಭವು ಯೂಟ್ಯೂಬ್ ಮುಖಾಂತರ ನೇರ ಪ್ರಸಾರವಾಗಲಿದೆ.
ಶಾಮನೂರು ಶಿವಶಂಕರಪ್ಪನವರಿಗೆ 2008ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯ, 2013ರಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.