ಕಲೆ ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮ

ರಾಜು ಬಯಲಾಟ ಅಕಾಡೆಮಿ ಅಧ್ಯಕ್ಷರಾಗಲಿ

ಸ್ಫೂರ್ತಿ ಸಾಂಸ್ಕೃತಿಕ ಸಂಘದ ಸಂಸ್ಥಾ ಪಕರೂ, ರಂಗ ಸಂಘಟಕರೂ ಆದ ಎನ್.ಎಸ್. ರಾಜು ಅವರು ಹಾಲಿ ಬಯಲಾಟ ಅಕಾಡೆಮಿ ಸದಸ್ಯರಾಗಿ ದ್ದಾರೆ. ಅವರ ಸೇವೆ ರಾಜ್ಯಮಟ್ಟಕ್ಕೂ ಸಿಗಲಿ ಎನ್ನುವ ಸದುದ್ದೇಶ ದಿಂದ ಅವರನ್ನು ಬಯಲಾಟ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡುವಂತೆ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮತ್ತು ಚನ್ನಗಿರಿ ಹಿರೇಮಠದ ಶ್ರೀ ಕೇದಾರ ಲಿಂಗ ಶಿವಶಾಂತ ವೀರ ಶಿವಾಚಾರ್ಯ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದರು.

ರಾಜು ಅವರ ಹೆಸರನ್ನು ಸಂಸ್ಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕೃಷ್ಣ ಮೂರ್ತಿಜೀ ಅವರು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಇರಲಿ ಎಂದರು.

ದಾವಣಗೆರೆ. ಸೆ.2- ಕಲೆ ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮ. ಸಂಸ್ಕೃತಿಯ ವಾಹಕ. ಸಂಸ್ಕೃತಿಯನ್ನು ಬಿಟ್ಟ ದೇಶ ನಿರ್ಜೀವ. ದೇಶದ ಆತ್ಮವೇ  ಸಂಸ್ಕೃತಿ. ಅದು ನಮ್ಮೆಲ್ಲರ ಆಸ್ತಿ ಕೂಡ. ಸಂಸ್ಕೃತಿ ಇಲ್ಲದಿದ್ದರೆ ಅದು ರಕ್ಕಸರ ರಾಜ್ಯ ಎಂದು ಸಂಸ್ಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಚೆನ್ನೈನ ಪಾ.ರ. ಕೃಷ್ಣಮೂರ್ತಿಜೀ ಹೇಳಿದರು.

ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯ ದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಮೂಡಲಪಾಯ, ಬಯಲಾಟ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಭಾರತವನ್ನು ಗುರುತಿಸುವುದೇ ಅದರ ಸಂಸ್ಕೃತಿಯಿಂದ. ಭಜನೆ, ಜಾನಪದ, ತತ್ವ ಪದ ಮುಂತಾದ ಗ್ರಾಮೀಣ ಕಲೆಗಳನ್ನು ಸಾರ್ಥಕ ಮಾಡುತ್ತಾ, ಕಲೆಯನ್ನು ಸಾಧನೆ ಮಾಡುತ್ತಿರುವ ಮತ್ತು ಅದನ್ನೇ ನಂಬಿ ಜೀವಿಸುತ್ತಿರುವವರು ಲಕ್ಷ, ಲಕ್ಷ ಜನರಿದ್ದಾರೆ. ಯಾವುದೇ ಪ್ರಶಸ್ತಿ, ಪುರಸ್ಕಾರ, ಪ್ರತಿಷ್ಠೆಗಾಗಿ ಕಲೆ ಪ್ರದರ್ಶನ ಮಾಡದೇ, ಶತ ಶತಮಾನಗಳಿಂದ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುತ್ತಿರುವವರು ಗ್ರಾಮೀಣ ಕಲಾವಿದರು ಎಂದು ಹೆಮ್ಮೆಯಿಂದ ಹೇಳಿಕೊಂಡರು.

ವೇದ ಕಾಲದಲ್ಲೇ ಕಲೆ ಆರಂಭವಾಯಿತು. ಭಾರತ ಮೊದಲ ಕಲೆ ಶಿಲ್ಪಕಲೆ. ವೇದ ಕಾಲದಲ್ಲಿ ಕಲೆ ಬಳಕೆಯಲ್ಲಿ ಇರಲಿಲ್ಲ. ಶಿಲ್ಪಕಲೆಯನ್ನೇ ಕಲೆ ಎಂದು ಕರೆಯುತ್ತಿದ್ದರು. ಕಲೆ ವಾದನವೂ ಹೌದು, ನಾದನವೂ ಹೌದು, ಜೀವನವೂ ಹೌದು, ಸಂಸ್ಕೃತಿಯೂ ಹೌದು. ದೇಶದಲ್ಲಿ ಕಲೆ, ಸಂಸ್ಕೃತಿಯ ಸಶಕ್ತ ಅಭಿವ್ಯಕ್ತಿ ಮಾಧ್ಯಮವಾಗಿ ಬೆಳೆಯತ್ತಾ ಬಂದಿದೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದಿನ ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಿಂದಾಗಿ ಬಯಲಾಟ, ದೊಡ್ಡಾಟಗಳು ಮರೀಚಿಕೆಯಗುತ್ತಿದ್ದು, ಬಯಲಾಟ ಬಯಲಾಗಿ ಹೋಗುತ್ತಿದೆ. ಪುನ: ಅಂತಹ ಕಲೆಗಳಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡಬೇಕಾಗಿದೆ. 

ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಎ. ಮಹಾ ಲಿಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಮಹಾವೀರ ಸಂಘದ ಗೌರವಾಧ್ಯಕ್ಷ ಎಂ.ಎ. ಸುದರ್ಶನ್‌ಕುಮಾರ್, ಕಸಾಪ ಕೋಶಾಧ್ಯಕ್ಷ ಬಿ. ದಿಳ್ಳೆಪ್ಪ ಮಾತನಾಡಿದರು.

ಸ್ಫೂರ್ತಿ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಎನ್.ಎನ್. ರಾಜು, ಖಜಾಂಚಿ ಅಮರಾವತಿ ಪರಮೇಶ್ವರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮತ್ತಿತರರು  ಉಪಸ್ಥಿತರಿದ್ದರು. ರಂಗಕರ್ಮಿ ಸಾಂಬಶಿವ ದಳವಾಯಿ ಅವರು ಜಾಗೃತಿ ಗೀತೆಯನ್ನಾಡಿದರು.

ಬಿಳಿಚೋಡು ಬಸವೇಶ್ವರ ಭಜನಾ ಸಂಘದ ಕಲಾವಿದರು ಭಜನೆ ಹಾಡಿದರು. ರಾಜು ಸ್ವಾಗತಿಸಿ ದರು. ಸದಾನಂದ ಕುಂಬಳೂರು ನಿರೂಪಿಸಿದರು. 

error: Content is protected !!