ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿಸಲು ಶ್ರೀರಾಮ ಸೇನೆ ಆಗ್ರಹ

ದಾವಣಗೆರೆ, ಸೆ.1- ಸಾರ್ವಜನಿಕ ಗಣೇಶೋ ತ್ಸವ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಬೇಕೆಂದು ಒತ್ತಾಯಿಸಿ, ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ಸೋಮವಾರ ಶ್ರೀರಾಮ ಸೇನಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ನಂತರ ಶಾಸಕ ಎಸ್.ವಿ. ರಾಮಚಂದ್ರ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೋವಿಡ್ ಸೋಂಕಿನ ಅಬ್ಬರ ರಾಜ್ಯದಲ್ಲಿ ತಗ್ಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಅಲ್ಲದೆ, ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಗೆ ಅನುಮತಿ ನೀಡುವ ಮತ್ತು ಶಾಲಾ-ಕಾಲೇಜುಗಳನ್ನು ಆರಂಭ ಮಾಡಲು ಆದೇಶ ಮಾಡಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಗಣೇಶೋತ್ಸವದ ಮೇಲೆ ನಿರ್ಬಂಧ ಹೇರಿರುವುದು ಅತ್ಯಂತ ಖಂಡನೀಯ ಎಂದು ಶ್ರೀರಾಮ ಸೇನಾ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ ಅಸಮಾಧಾನ ವ್ಯಕ್ತಪಡಿಸಿದರು.

ಗಣೇಶೋತ್ಸವವನ್ನು ನೆಚ್ಚಿಕೊಂಡು ಸಾವಿ ರಾರು ಕಲಾವಿದರು ಕಳೆದ ನಾಲ್ಕೈದು ತಿಂಗಳು ಗಳಿಂದ ಗಣಪತಿ ಮೂರ್ತಿಗಳನ್ನು ತಯಾರಿಸಿದ್ದಾರೆ.  ಶಾಮಿಯಾನದವರು, ವಿದ್ಯುತ್‌ ದೀಪ ಅಲಂಕಾ ರಕಾರರು, ವಾದ್ಯವೃಂದ ಕಲಾವಿದರು ಸೇರಿದಂತೆ ಹಲವರು ಗಣಪತಿ ಹಬ್ಬದಲ್ಲಿ ಒಂದಿಷ್ಟು ದುಡಿದು ಕೊಂಡು ಜೀವನ ಸಾಗಿಸುವ ಆಲೋಚನೆಯ ಲ್ಲಿದ್ದರು. ಆದರೆ, ಸರ್ಕಾರ ಹಬ್ಬದ ಮೇಲೆ ನಿರ್ಬಂಧ ಹೇರಿರುವುದರಿಂದ ಈಗ ಇವರಿಗೆ ದಿಗಿಲು ಬಡಿದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಶ್ರೀರಾಮ ಸೇನಾ ಮುಖಂಡರಾದ ಡಿ.ಬಿ. ವಿನೋದರಾಜ್, ಕರಾಟೆ ರಮೇಶ್, ಶ್ರೀಧರ್, ಸುನಿಲ್ ವಾಲಿ, ರಾಹುಲ್, ರಾಜು, ರಘು, ಮಾರ್ಕಂಡಯ್ಯ ಸೇರಿದಂತೆ ಇತರರು ಇದ್ದರು.

error: Content is protected !!