ಶೀಘ್ರವೇ 36 ಕೋ. ರೂ.ವೆಚ್ಚದ ಸಿಆರ್‌ಸಿ ಕೇಂದ್ರ

ದಿವ್ಯಾಂಗ ಮಕ್ಕಳಿಗೆ ಸಲಕರಣೆಗಳ ಕಿಟ್ ವಿತರಿಸಿದ ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ, ಆ.31- ದಿವ್ಯಾಂಗ ವ್ಯಕ್ತಿಗಳ ಕೌಲ್ಯಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)ದ ವಿಶಾಲವಾದ ಸುಮಾರು 36 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಮಂಜೂರಾತಿ ಸಿಗಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಅವರು, ಇಂದು ನಗರದ ದೇವರಾಜ್ ಅರಸ್ ಬಡಾವಣೆ ಯಲ್ಲಿನ ಸಿಆರ್‌ಸಿ ಕೇಂದ್ರದಲ್ಲಿ ದಿವ್ಯಾಂಗ ಮಕ್ಕಳಿಗೆ ಸಲಕರಣೆಗಳ ಕಿಟ್ ವಿತರಿಸಿ ಮಾತನಾಡಿದರು.

ತಾಲ್ಲೂಕಿನ ಕೊಗ್ಗನೂರು ಗ್ರಾಮದಲ್ಲಿ ಸುಮಾರು 12 ಎಕರೆ ಪ್ರದೇಶದಲ್ಲಿ 36 ಕೋಟಿ ವೆಚ್ಚದ ನೂತನ ಸಿಆರ್‌ಸಿ ಕೇಂದ್ರ ನಿರ್ಮಾಣಕ್ಕೆ ಹಲವು ದಿನಗಳ ಪ್ರಯತ್ನ ಈಗ ಕೈಗೂಡಿದೆ. ಈ ಕಟ್ಟಡ ನಿರ್ಮಾಣವಾದರೆ ಕರ್ನಾ ಟಕ ಮತ್ತು ಗೋವಾ ರಾಜ್ಯಗಳ ದಿವ್ಯಾಂಗ ಮಕ್ಕಳಿಗೆ ಬಹಳಷ್ಟು ಅನು ಕೂಲವಾಗಲಿದೆ. ಕೇಂದ್ರ ಬಿಜೆಪಿ ಸರ್ಕಾರ ಕಷ್ಟಪಟ್ಟು ಪ್ರಯತ್ನಿಸಿದ ಫಲವಾಗಿ ಈಗಾಗಲೇ ಪ್ರಾರಂಭಿಸಿ ರುವ ದಾವಣಗೆರೆಯ ಲ್ಲಿನ ಸಿಆರ್‌ಸಿ ಕೇಂದ್ರವು ಈ ಎರಡೂ ರಾಜ್ಯಗಳ ದಿವ್ಯಾಂಗರಿಗೆ ಅನುಕೂಲಕರವಾಗಿದೆ ಎಂದು ಹೇಳಿದರು.

ಈಗಾಗಲೇ ನೂತನ ಸಿಆರ್‌ಸಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಹೈದರಾಬಾದ್‌ನಲ್ಲಿರುವ ಸಿಆರ್‌ಸಿಯ ಮುಖ್ಯ ಕಚೇರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಕೇಂದ್ರ ಸರ್ಕಾರಕ್ಕೆ ಈ ಪ್ರಸ್ತಾವನೆ ಸಲ್ಲಿಸಿದ ನಂತರ 2-3 ತಿಂಗಳಿನಲ್ಲಿ ಮಂಜೂರಾತಿ ದೊರಕಲಿದೆ. ಈಗಿನ ಸಿಆರ್‌ಸಿ ಕೇಂದ್ರದಲ್ಲಿ ಕೇವಲ 50-60 ಜನರಿಗೆ ಮಾತ್ರ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ನೂತನ ವಿಶಾಲವಾದ ಕೇಂದ್ರ ಪ್ರಾರಂಭಗೊಂಡರೆ ಸುಮಾರು 300-400 ಮಂದಿ ದಿವ್ಯಾಂಗರಿಗೆ ಏಕಕಾಲದಲ್ಲಿ ಚಿಕಿತ್ಸೆ, ತರಬೇತಿ, ವಸತಿ ಮತ್ತಿತರೇ ಸೌಲಭ್ಯಗಳ ಜೊತೆಗೆ ನೌಕರಿ ಕೊಡಿಸುವ ಕೆಲಸವನ್ನೂ ಮಾಡಲಾಗುವುದು. ಈ ಕೇಂದ್ರದ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಇದೇ ವೇಳೆ 14 ಮಂದಿ ದಿವ್ಯಾಂಗ ಮಕ್ಕಳಿಗೆ ವೀಲ್ ಚೇರ್, ವಾಚ್, ಮೊಬೈಲ್ ಸೇರಿದಂತೆ ಸಲಕರಣೆ ಕಿಟ್ ಹಾಗೂ ದಿವ್ಯಾಂಗ ಮಕ್ಕಳ ಲಾಲನೆ-ಪಾಲನೆ ಬಗ್ಗೆ ತರಬೇತಿ ಪಡೆದ ಪೋಷಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಸಿಆರ್‌ಸಿ ಕೇಂದ್ರದ ಅಧಿಕಾರಿಗಳಾದ ಥಾಮರೈ ಸೆಲ್ವನ್, ಸೈಕಾಲಜಿಸ್ಟ್ ಶರೀಫ್ ಯಾಸಿನ್, ರಾಜು ತಲಕೋಟಿ, ಡಾ. ವಿಜಯ್ ರಾಜ್ ಬೊಲ್ಲಾಪಲ್ಲಿ, ಎಜುಕೇಟರ್ ಡಾ. ರಂಜಿತ್ ಕುಮಾರ್, ಡಾ. ಸುರೇಶ್‌ಚಂದ್ರ ಕೇಸರಿ ಸೇರಿದಂತೆ ಇತರರು ಇದ್ದರು.

error: Content is protected !!