ಕಸಾಪ ಚುನಾವಣೆ : ಹರಿಹರ ತಾ.ನಲ್ಲಿ ಶೇ.40 ಮತದಾನ

ಬಿ. ವಾಮದೇವಪ್ಪಗೆ 351, ಶಿವಕುಮಾರ ಕುರ್ಕಿಗೆ 98 ಮತಗಳು

ಹರಿಹರ, ನ.21- ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಹರಿಹರ ತಾಲ್ಲೂಕಿನಲ್ಲಿ ಶೇ. 40 ರಷ್ಟು ಮತದಾನ ನಡೆದಿದೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.

ನಗರದ ಸರ್ಕಾರಿ ಪ್ರೌಢಶಾಲೆ ಮತ್ತು  ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಮತದಾನ ನಡೆಯಿತು. 

ಹರಿಹರ ನಗರದ ಮತಗಟ್ಟೆಯಲ್ಲಿ 1,213 ಮತದಾರರಲ್ಲಿ 358 ಪುರುಷರು ಮತ್ತು 100 ಮಹಿಳಾ ಮತದಾರರು ಸೇರಿ ದಂತೆ ಒಟ್ಟು 458 ಮತದಾರರು ಮತದಾನ ಮಾಡಿದ್ದಾರೆ. ಮಲೇಬೆನ್ನೂರಿನಲ್ಲಿ 900 ಮತದಾರರಲ್ಲಿ 303 ಮತದಾರರು ತಮ್ಮ ಮತವನ್ನು ಹಾಕಿದ್ದಾರೆ.

ಸಂಜೆ ನಡೆದ ಮತ ಎಣಿಕೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಾಮದೇವಪ್ಪ ಅವರಿಗೆ 351 ಮತ್ತು ಶಿವಕುಮಾರ ಕುರ್ಕಿ ಅವರಿಗೆ 98 ಮತಗಳು ಲಭ್ಯವಾಗಿವೆ. 9 ಮತಗಳು ತಿರಸ್ಕೃತವಾಗಿವೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಶೇಖರಗೌಡ ಮಾಲಿ ಪಾಟೀಲ್ ಅವರಿಗೆ 268 ಮತ್ತು ಮಹೇಶ್ ಜೋಷಿ ಅವರಿಗೆ 117 ಮತಗಳು ಬಿದ್ದಿವೆ.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ್, ನಿವೃತ್ತ ಪ್ರೊ. ಎಸ್.ಎ. ಭಿಕ್ಷಾವರ್ತಿಮಠ, ಹಿರಿಯ ಸಾಹಿತಿಗಳಾದ ಸಿ.ವಿ‌ ಪಾಟೀಲ್, ಹುಲಿಕಟ್ಟಿ ಹಾಲೇಶಪ್ಪ, ಕಲೀಂ ಭಾಷಾ, ಶಿವಕುಮಾರ್ ಕೊಂಡಜ್ಜಿ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಮಾಜಿ ದೂಡಾ ಸದಸ್ಯ ಹೆಚ್. ನಿಜಗುಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷರಾದ ರೇವಣಸಿದ್ದಪ್ಪ ಅಂಗಡಿ, ಡಿ.ಎಂ. ಮಂಜುನಾಥಯ್ಯ, ನಿವೃತ್ತ ಮುಖ್ಯೋ ಪಾಧ್ಯಾಯ ಎಂ.ಎನ್. ಬಸವರಾಜಪ್ಪ, ವೈ.ಎನ್. ಕೃಷ್ಣಮೂರ್ತಿ, ಎಸ್.ಜೆ.ವಿ.ಪಿ. ಕಾಲೇಜು ನಿರ್ದೇಶಕ ನಂದಿಗಾವಿ ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!