ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್
ದಾವಣಗೆರೆ, ನ.21- ನಗರದ ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ವಾರ್ಷಿಕ ಮಹಾಸಭೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ನಡೆಯಿತು.
ಸಭೆಯನ್ನು ಉದ್ಘಾಟಿಸಿದ ಸಂಘದ ಅಧ್ಯಕ್ಷ ಜಿ.ಎಂ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸಂಘವು ಪ್ರತಿ ವರ್ಷವೂ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದುತ್ತಾ 2020-21 ನೇ ಸಾಲಿನಲ್ಲಿ 7.26 ಕೋಟಿ ರೂ ಷೇರು ಬಂಡವಾಳ, 142.30 ಕೋಟಿ ಠೇವಣಿ ಸಂಗ್ರಹಿಸಿ, 2.30 ಕೋಟಿ ಲಾಭ ಗಳಿಸುವತ್ತ ದಾಪುಗಾಲು ಹಾಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮ ಸಹಕಾರಿಯು ಮುಂಬರುವ ದಿನಗಳಲ್ಲಿ ಸದಸ್ಯರಿಗೆ ಎಸ್ಎಂಎಸ್ ಅಲರ್ಟ್, ಮೊಬೈಲ್ ಬ್ಯಾಂಕಿಂಗ್, ನೆಫ್ಟ್, ಆರ್‌ಟಿಜಿಎಸ್, ಸಬಲೀಕರಣಗೊಳಿಸುವ ಸೌಲಭ್ಯಗಳನ್ನು ನೀಡಲಿದೆ. ಈಗಾಗಲೇ ಸಿಬಿಎಸ್ ವ್ಯವಸ್ಥೆ ಅಳವಡಿಸಿದೆ. ಇನ್ನೆರಡು ವರ್ಷಗಳಲ್ಲಿ 200 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಿದೆ ಎಂದು ವಿವರಿಸಿದರು.
ಶ್ರೀಮತಿ ಯಶೋಧಮ್ಮ, ಕು. ಜಿ.ಪಿ. ಕವಿತಾ, ಶ್ರೀಮತಿ ಶೃತಿ, ಕು. ನಾಗಶ್ರೀ ಪ್ರಾರ್ಥಿಸಿದರು. ಸಹಕಾರಿಯ ವಿಷಯ ಸಲಹೆಗಾರ ಎಸ್.ಸಿ. ಮಹಾರುದ್ರಪ್ಪ ಸ್ವಾಗತಿಸಿದರು. ನಿರ್ದೇಶಕ ಕೆ.ಎನ್. ಗುರುಮೂರ್ತಿ ವಂದಿಸಿದರು. ಹಿರಿಯ ನಿರ್ದೇಶಕ ಬಿ.ಆರ್. ನೀಲಕಂಠಪ್ಪ ಅವರು ನಿರ್ದೇಶಕರು ಪಡೆದಿರುವ ಸಾಲಗಳ ಬಳಕೆ ಕುರಿತು ವರದಿ ಮಂಡಿಸಿದರು.
ಯುವ ನಿರ್ದೇಶಕ ಜಿ.ಎಸ್ ಅನಿತ್ ಕುಮಾರ್ ಅವರು, ಸಹಕಾರಿಯು ನಡೆದ ಬಂದ ದಾರಿ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟರು. ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ಮಲ್ಲಪ್ಪ ಅವರು ಸಹಕಾರಿಯ ಆಡಳಿತ ವರದಿ ಮಂಡಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ಐ.ಬಿ. ಕಡದಕಟ್ಟೆ ಅವರು ಲಾಭ ಹಂಚಿಕೆ ಕುರಿತು ವರದಿ ವಾಚಿಸಿದರು. ಸಹಕಾರಿ ಮುಖ್ಯ ಪ್ರವರ್ತಕ ಜಿ.ಎಂ ಲಿಂಗರಾಜು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮಹಿಳಾ ನಿರ್ದೇಶಕರಾದ ಶ್ರೀಮತಿ ಗಾಯತ್ರಿ ಸುಭಾಶ್ಚಂದ್ರ ಅವರು ಹಾಜರಿದ್ದರು. ನಿರ್ದೇಶಕರುಗಳಾದ ಎ.ಸಿ ಬಸವರಾಜ್, ಎ.ಎಸ್ ಗುರುಮೂರ್ತಿ, ಸಿದ್ದನಗೌಡ, ಸಿ ಪಾಟೀಲ್, ಕೆ.ಎಸ್. ವಿಜಯಕುಮಾರ್, ಎ.ಬಿ. ರವೀಂದ್ರನಾಥ್ ಹಾಜರಿದ್ದರು. ಸಹಕಾರಿಯ ಸಾಲಗಾರರ ಸಮಿತಿ ಸದಸ್ಯ ಸುರೇಶ್‌ಬಾಬು ಚಿತ್ರದುರ್ಗ ಬಿ. ಚನ್ನಬಸಪ್ಪ ಎ.ಆರ್.ಎಸ್. ಶಿವಮೊಗ್ಗ ಹಾಗೂ ಕಾನೂನು ಸಲಹೆಗಾರರಾದ ಎಂ.ಪಿ. ಚಂದನ್ ಪಟೇಲ್ ಅವರುಗಳು ಹಾಜರಿದ್ದರು.
ಜಿಎಂಐಟಿ ಕಾಲೇಜಿನ ಆಡಳಿತ ಅಧಿಕಾರಿ ಸುಭಾಶ್ಚಂದ್ರ, ಪ್ರಾಂಶುಪಾಲ ವೈ. ವಿಜಯ್‌ಕುಮಾರ್ ಇತರರು ಹಾಜರಿದ್ದರು.