ನೀರು ಆಹಾರವಿಲ್ಲದೆ ಜೀವಿಸಬಹುದು, ಆಮ್ಲಜನಕವಿಲ್ಲದೆ ಬದುಕಲು ಸಾಧ್ಯವಿಲ್ಲ

ಎವಿಕೆ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಪಿ. ಕುಮಾರ್‌

ದಾವಣಗೆರೆ, ಆ.18- ನಗರದ ಎವಿಕೆ ಕಾಲೇಜಿನಲ್ಲಿ ಇಕೋ ಕ್ಲಬ್ ಕಾರ್ಯಕ್ರಮದ ಅಡಿಯಲ್ಲಿ `ಉಸಿರಿಗಾಗಿ ಹಸಿರು’, `ಹಸಿರು ನಾಶಮಾಡಿರುವ ತಪ್ಪಿಗೆ ಗಿಡನೆಟ್ಟು ಬೆಳೆಸಿ’ ಆಶಯದೊಂದಿಗೆ ಸಸಿ ನಡುವ ಕಾರ್ಯಕ್ರಮ ನಡೆಸಲಾಯಿತು.

ವಿದ್ಯಾರ್ಥಿನಿಯರು ಹಾಗೂ ಅಧ್ಯಾಪಕರು, ಅಧ್ಯಾಪಕೇತರರು ಭಾಗವಹಿಸಿ ವಿವಿಧ ಸಸಿ ನೆಟ್ಟರು. ತಾವು ನೆಟ್ಟ ಸಸಿಯನ್ನು ತಾವೇ ನೀರು-ಗೊಬ್ಬರ ಹಾಕಿ ಸಾಕುವುದಾಗಿ ದತ್ತು ತೆಗೆದುಕೊಳ್ಳಲು ಪ್ರಾಚಾರ್ಯ ಡಾ. ಬಿ.ಪಿ. ಕುಮಾರ್‌ ಕೋರಿದರು. ಅದರಂತೆ ಎಲ್ಲರೂ ಕೋರಿಕೆ ಸ್ವೀಕರಿಸಿ ಸಸಿಗಳನ್ನು ಪೋಷಿಸುವುದಾಗಿ ಘೋಷಿಸಿದರು. 

ಪ್ರಾಂಶುಪಾಲ ಡಾ. ಬಿ.ಪಿ. ಕುಮಾರ್‌ ಮಾತನಾಡಿ, ನೀರು ಆಹಾರವಿಲ್ಲದೆ ಹಲವು ದಿನ ಮಾನವ ಜೀವಿಸಬಹುದು, ಆಮ್ಲಜನಕವಿಲ್ಲದೇ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ. ಈ ಸತ್ಯವನ್ನು ಕೊರೊನಾ 2ನೇ ಅಲೆ ನೆನಪಿಸಿದ್ದು ಇತಿಹಾಸ. ಆದ್ದರಿಂದ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡಿದಲ್ಲಿ ಅಂತಹ ಪರಿಸ್ಥಿತಿ ಎದುರಾಗದು ಎಂದು ತಿಳಿಸಿದರು. ಎನ್.ಎಸ್.ಎಸ್. ಶಿಬಿರಾಧಿಕಾರಿಗಳಾದ ಪ್ರಭಾವತಿ ಎಸ್.ಹೊರಡಿ, ನ್ಯಾಕ್ ಸಂಯೋಜನಾ ಧಿಕಾರಿಗಳಾದ ಶ್ರೀಮತಿ ಜಿ.ಸಿ. ನೀಲಾಂಬಿಕ, ಆಂತರಿಕ ಗುಣಮಟ್ಟದ ವಿಭಾಗದ ಸಂ ಯೋಜನಾಧಿಕಾರಿಯಾದ ಆರ್.ಆರ್. ಶಿವಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!