ದಾವಣಗೆರೆ, ಆ.17 – ಜಿಲ್ಲಾ ಸ್ವಾತಂತ್ರ್ಯ ಯೋಧರ ಮತ್ತು ಉತ್ತ ರಾಧಿಕಾರಿಗಳ ಸಂಘದಿಂದ 75 ನೇ ಸ್ವಾತಂತ್ರ್ಯ ಮಹೋತ್ಸವದ ಸರಳ ಸಮಾರಂಭವನ್ನು ಹುಳ್ಳೇರ ಮರುಳಸಿ ದ್ದಪ್ಪ ನಿವಾಸದಲ್ಲಿ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ನಗರದ ಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಸ್ವಾತಂತ್ರ್ಯ ಹೋರಾಟ ಗಾರರಾದ ಹುಳ್ಳೇರ ಮರುಳಸಿದ್ದಪ್ಪ ಮತ್ತು ಬಿ. ಹಾಲಪ್ಪ ಅವರುಗಳನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸ್ವಾತಂತ್ರ ಯೋಧರ ಮತ್ತು ಉತ್ತರಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹುಳ್ಳೇರ ಮರುಳಸಿದ್ದಪ್ಪ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗ ಬೇಕು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ಮನೆತ ನದವರು ಮತ್ತು ಅವರ ಪರಿವಾರ ದವರನ್ನು ಗುರುತಿಸುವ ಕಾರ್ಯ ಆಗಬೇಕು ಎಂದು ಒತ್ತಾಯಿಸಿದರು.
ಪಂಜಾಬ್, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಇರುವಂತೆ ಸ್ವಾತಂತ್ರ್ಯ ಹೋರಾಟಗಾರರ ಭವನ ವನ್ನು ನಿರ್ಮಿಸಬೇಕೆಂದು ಅವರು ಒತ್ತಾಯಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆಸಿ ಹಸ್ತಲಾಘವ ನೀಡಿ ತಮ್ಮ ಮೆಚ್ಚುಗೆ ಯನ್ನು ವ್ಯಕ್ತ ಪಡಿಸಿದ್ದನ್ನು ಮರುಳಸಿದ್ದಪ್ಪ ಪ್ರಸ್ತಾಪಿಸಿದರು.
ಹುಳ್ಳೇರ ಮರುಳಸಿದ್ದಪ್ಪ ನವ ರಂತಹ ಮಹನೀಯರನ್ನು ಉಪೇಕ್ಷಿಸಿ ಸರ್ಕಾರವು ದಾವಣಗೆರೆಯಲ್ಲಿ ಗಾಂಧಿ ಭವನ ನಿರ್ಮಿಸಿರುವುದು ವಿಷಾದನೀಯ ಸಂಗತಿ ಎಂದು ಜೋಗಪ್ಪನವರ ಕಾಡಪ್ಪರ ಕೊಟ್ರಪ್ಪ ಅವರು ವ್ಯಾಕ್ಯುಲತೆ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಇಂದೂಧರ ನಿಶಾನಿಮಠ, ಶ್ರೀನಿವಾಸ ಕಾರಂತ್, ವಕೀಲ ಮಂಜುನಾಥ, ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಸಂಗಪ್ಪನವರ ಮಗ ಹನುಮಂತಪ್ಪ, ಹುಳ್ಳೇರ ಶರಣಪ್ಪನವರ ಪತ್ನಿ ಶಿವಗಂಗಮ್ಮ, ಉಷಾರಾಣಿ, ಕಿರಣ್ ಬಾಳೆಹೊಲದ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್. ಪಿ. ಸತ್ಯನಾರಾ ಯಣರಾವ್, ಕಾರ್ಯ ದರ್ಶಿ ಯು. ಬಾಲಕೃಷ್ಣ ವೈದ್ಯ, ಉಪಾಧ್ಯಕ್ಷ ಡಾ. ಸಿ. ಕೆ. ಆನಂದತೀರ್ಥಾಚಾರ್, ಸಹ ಕಾರ್ಯದರ್ಶಿ ಡಿ. ಶೇಷಾಚಲ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.