ಮಲೇಬೆನ್ನೂರು, ನಂ. 18- ಭಾರೀ ಮಳೆಯಿಂದಾಗಿ ಹರಿಹರ ತಾಲ್ಲೂಕಿನಲ್ಲಿ ಭತ್ತದ ಬೆಳೆ ಹಾನಿಯಾಗಿ ರೈತರಿಗೆ ತೊಂದರೆ ಆಗಿರುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕೃಷಿ ಹಾಗೂ ಕಂದಾಯ ಸಚಿವರುಗಳಿಗೆ ಮತ್ತು ಜಿಲ್ಲಾಧಿಕಾರಿಗಳ ವರದಿ ಸಮೇತ ತಿಳಿಸಿ, ಹೆಚ್ಚಿನ ಪರಿಹಾರ ನೀಡು ವಂತೆ ಮನವಿ ಮಾಡುವುದಾಗಿ ಮಾಜಿ ಶಾಸಕ ಬಿ.ಪಿ. ಹರೀಶ್ ತಿಳಿಸಿದ್ದಾರೆ.
ನಿಟ್ಟೂರು, ಆದಾಪುರ, ಕುಂಬಳೂರು ಮತ್ತು ಜಿಗಳಿ ಗ್ರಾಮಕ್ಕೆ ಭೇಟಿ ನೀಡಿ ಭತ್ತದ ಬೆಳೆ ಹಾನಿ ವೀಕ್ಷಿಸಿದ ನಂತರ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ರೈತರಿಗೆ ಭರವಸೆ ನೀಡಿದರು.
ಅಕಾಲಿಕ ಮಳೆಗೆ ಯಾರು ಹೊಣೆಗಾರರು. ಆದರೆ ಪದೇ ಪದೇ ರೈತರಿಗೆ ತೊಂದರೆ ಆಗುತ್ತಿರುವುದು ಬೇಸರ ತಂದಿದೆ ಎಂದು ಹೇಳಿದರು.
ಹರಿಹರ ತಾ.ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಆದಾಪುರ ವೀರೇಶ್, ಮುಖಂಡ ನಿಟ್ಟೂರು ಇ.ಎಂ ಮರುಳಸಿದ್ದೇಶ್ ಹಾಗೂ ರೈತರು ಇದ್ದರು.