ಜಿಲ್ಲಾ ಬಿಜೆಪಿ ಕಚೇರಿ: ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟಗಾರ ರನ್ನು ಸ್ಮರಿಸುತ್ತಾ ಪಕ್ಷದ ಸಂದೇಶವನ್ನು ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮುಖಂಡರುಗಳಾದ ಮಾಜಿ ಸಚೇತಕ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ, ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಮೇಯರ್ ಅಜಯ್ ಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರ, ಯಶವಂತ್ ರಾವ್ ಜಾಧವ್, ಸಂಗನಗೌಡ್ರು, ದೇವೇಂದ್ರಪ್ಪ, ಲಿಂಗರಾಜ್ ಗೌಳಿ, ಗೋಪಾಲ್ ರಾವ್ ಮಾನೆ, ಎಲ್.ಡಿ. ಗೋಣಪ್ಪ, ಹೇಮಂತ್ ಕುಮಾರ್, ಜಿಲ್ಲಾ ಮಾಧ್ಯಮ ಪ್ರಮುಖ ಹೆಚ್.ಪಿ. ವಿಶ್ವಾಸ್, ಪಾಲಿಕೆ ಸದಸ್ಯರುಗಳಾದ ಸೋಗಿ ಶಾಂತ್ ಕುಮಾರ್, ಕೆ.ಎಂ. ವೀರೇಶ್ ಪೈಲ್ವಾನ್, ಎಸ್.ಟಿ. ವೀರೇಶ್, ಗಾಯತ್ರಿ ಬಾಯಿ, ಕಿಶೋರ್ ಕುಮಾರ್, ಮಂಜು ಚಿಕ್ಕಿ ಹಾಗೂ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.
ದುಗ್ಗಮ್ಮ ಪೇಟೆ ಸರ್ಕಾರಿ ಹಿ.ಪ್ರಾ. ಶಾಲೆ: ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗರಾಜು ಹಾವನೂರು ಧ್ವಜಾರೋಹಣ ನೆರವೇರಿಸಿದರು. ವಿದ್ಯಾಗಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿರುವ ಎಲ್ಲ ಶಿಕ್ಷಕರನ್ನು ಶ್ಲಾಘಿಸಿದರು. ಶಿಕ್ಷಕರುಗಳಾದ ಕುಸುಮ, ಸಿದ್ದಮ್ಮ, ರತ್ನಮ್ಮ ಮತ್ತು ವಿರೂಪಾಕ್ಷಪ್ಪ ಹಾಗೂ ಎಸ್‌ಡಿಎಂಸಿ ಸದಸ್ಯರುಗಳಾದ ವೀರೇಶ್ ಮೌನೇಶಾಚಾರ್, ಶಶಿಧರ್ ಹಾಜರಿದ್ದರು. ಮುಖ್ಯ ಶಿಕ್ಷಕಿ ಕಲ್ಲಮ್ಮ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ವಜ್ರೇಶ್ವರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆ: ಸ್ವಾತಂತ್ರ್ಯ ದಿನಾಚರಣೆಯನ್ನು ಸಿದ್ದಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಆಚರಿಸಲಾಯಿತು. ದಿ. ಎಂ.ಎಸ್. ಶಿವಣ್ಣನವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಡಿ.ಎಸ್. ಪ್ರಶಾಂತ್ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿದರು. ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಕಾರ್ಯದರ್ಶಿ ಡಿ.ಎಸ್. ಹೇಮಂತ್, ನಿರ್ದೇಶಕರಾದ ಡಾ. ಜಯಂತ್, ಪ್ರಾಚಾರ್ಯೆ ಗಾಯಿತ್ರಿ, ಮುಖ್ಯ ಶಿಕ್ಷಕಿ ಕೆ.ಎಸ್. ರೇಖಾರಾಣಿ, ಎಂ.ಪಿ. ಶಾಂತಿ ಶುಭ ಕೋರಿದರು. ದೈಹಿಕ ಶಿಕ್ಷಕರು ಧ್ವಜಾರೋಹಣ ಕಾರ್ಯಕ್ರಮ ನಿರ್ವಹಿಸಿದರು.
ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ: ನಿವೃತ್ತ ಡಿವೈಎಸ್‌ಪಿ ಪಿ.ಎಸ್. ಶಾಹು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ಕಾಲೇಜು ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಪಾಲ್ಗೊಂಡಿದ್ದರು. ಡಾ. ವೀಣಾ ನಾಡಿಗ್ ಪ್ರಾರ್ಥಿಸಿದರು. ಡಾ. ತಿಪ್ಪೇಸ್ವಾಮಿ ಏಕಬೋಟೆ ಸ್ವಾಗತಿಸಿದರು. ಡಾ. ಕೆ.ಸಿ. ದೇವೇಂದ್ರಪ್ಪ ವಂದಿಸಿದರು. ಡಾ. ಜಿ.ಪಿ. ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.
ಸ.ಪ್ರ.ದ. ಕಾಲೇಜು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಪ್ರಾಂಶುಪಾಲ ತೂ.ಕ. ಶಂಕರಯ್ಯ ಧ್ವಜಾರೋಹಣ ನೇರವೇರಿಸಿ ದರು. ಕಾಲೇಜು ಅಧ್ಯಾಪಕರುಗಳಾದ ಪ್ರೊ. ಭೀಮಣ್ಣ ಸುಣಗಾರ, ತಿಪ್ಪಾರೆಡ್ಡಿ, ಶಂಕರ್ ಶೀಲಿ, ಗುರುಮೂರ್ತಿ, ಅಂಜಿನಪ್ಪ, ದಾದಾ ಪೀರ್ ನವಿಲೇಹಾಳ್, ಜಯಣ್ಣ, ಕೊಟ್ರಪ್ಪ, ಗಿರಿಸ್ವಾಮಿ, ವೀರೇಶ್, ಸದಾಶಿವ, ಲಕ್ಷ್ಮಣ್, ಆನಂದಕಂದ, ಸುರೇಶ್, ಮರು ಳಸಿದ್ದಪ್ಪ, ಜೆ.ಎಂ. ಮಂಜುನಾಥ್, ಶಿವಕು ಮಾರ್, ಪ್ರಕಾಶ್ ಕೊರಮರ, ನಂದಿಹಳ್ಳಿ ಮಂಜಣ್ಣ, ದಿನೇಶ್, ನಾರಾಯಣಸ್ವಾಮಿ, ನರೇಶ್, ಪ್ರೊ. ಜಿ.ಟಿ. ಶಶಿಕಲಾ, ಲತಾ, ಗೌರಮ್ಮ, ತ್ರಿವೇಣಿ, ರಂಗಸ್ವಾಮಿ, ಶಾಂತಕುಮಾರಿ ಇನ್ನಿತರರಿದ್ದರು.
ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ (ಸಿಬಿಎಸ್‌ಇ) ಶಾಲೆ: ಕಾರ್ಯಕ್ರಮದಲ್ಲಿ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಸತಿಯುತ ಸಿಬಿಎಸ್‌ಇ ಶಾಲೆ, ಐಜಿಸಿಎಸ್‌ಇ ಶಾಲೆ, ಪಿಯು ಕಾಲೇಜು, ಡಾ. ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ (ಸಿಬಿಎಸ್‌ಇ) ಶಾಲೆಯ ಮುಖ್ಯಸ್ಥರಾದ ಮಂಜುನಾಥ್ ರಂಗರಾಜು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನದ ಮಹತ್ವ ಹಾಗೂ ಸಂಗೊಳ್ಳಿ ರಾಯ ಣ್ಣನವರ ಜನ್ಮದಿನದ ಕುರಿತು ತಿಳಿಸಿದರು. ಸಹ ಶಿಕ್ಷಕ ಪಿ.ವಿ. ಪ್ರಭು ಮುಖ್ಯಅತಿಥಿಗಳ ಪರಿಚಯ ಮಾಡಿಕೊಟ್ಟರು. ಪ್ರಾಂಶುಪಾಲ ಸಮರೇಂದ್ರ ಪಾಣಿಗ್ರಹಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕ ಸಲಹೆಗಾರ ಮಂಜಪ್ಪ ಮಾತನಾಡಿದರು. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಾದ ಎಂ.ಎಸ್. ಯುಕ್ತಿ ಭರತನಾಟ್ಯ ಪ್ರದರ್ಶಿಸಿದರು. ಕೆ.ಟಿ. ವಿಕಾಸ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀಲಕ್ಷ್ಮೀ ವಾದ್ಯದ ಮೂಲಕ ದೇಶ ಭಕ್ತಿಗೀತೆ ನುಡಿಸಿದರು. ಸ್ಲೈಡ್ ಶೋ ಮೂಲಕ ಕೊರೊನಾ ವಾರಿಯರ್ಸ್‌ಗಳನ್ನು ಗೌರವಿಸಲಾಯಿತು. ನರ್ಸರಿ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಸ್ಥರು, ಶಾಲೆಯ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಸಹಶಿಕ್ಷಕಿ ವೀರಾಂಬಿಕಾ ಹಾಗೂ ವಿದ್ಯಾ ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಎಲ್ಸಿ ಲೂಯಿಸ್ ಸ್ವಾಗತಿಸಿದರು. ಸಹಶಿಕ್ಷಕ ಕೆ. ಬಸವರಾಜ್ ವಂದಿಸಿದರು.
ದಾವಣಗೆರೆ ದಕ್ಷಿಣ ರೋಟರಿ: ರೋಟರಿ ಬಾಲಭವನದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ರೋಟರಿ ಸಹ ರಾಜ್ಯಪಾಲ ಚಂದ್ರಚಾರ್, ರೋಟರಿ ಅಧ್ಯಕ್ಷ ಹೆಚ್.ಜಿ. ಬಸವರಾಜ, ಗಜಾನನ, ಉಮೇಶ್ ಶೆಟ್ಟಿ, ಶಂಕರ್ ಪಾಟೀಲ, ಮಲ್ಲಸಾ ಕಾಟ್ವೆ, ಅಶೋಕ ರಾಯಭಾಗಿ, ಅಮೀರ ಮೇಡಂ, ರೋಟರಾಕ್ಟ್ ಅಧ್ಯಕ್ಷ ಸದಾನಂದ, ಚೇತನ, ಮಾನಸ, ಶ್ರೀಧರ್ ಇನ್ನಿತರರಿದ್ದರು.
ಬೀಡಿ ಕಾರ್ಮಿಕರ ಕಲ್ಯಾಣ ಸಂಘ: ಸಂಘದ ಕಚೇರಿಯಲ್ಲಿ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಎಂ. ರಾಜಾಸಾಬ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಜ್ಯ ಸರ್ಕಾರ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಅನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಮುಬೀನಾ ಬಾನು ಪ್ರಾರ್ಥಿಸಿದರು. ರೋಮನ್ ಬಾನು ಸ್ವಾಗತಿಸಿದರು. ಸಿಮ್ರಾನ್ ಬಾನು ವಂದಿಸಿದರು. ಕೊನೆಯಲ್ಲಿ ಸಿಹಿ ವಿತರಿಸಲಾಯಿತು.
ವಿದ್ಯಾ ವಿಕಾಸ್ ಕಾನ್ವೆಂಟ್ ಶಾಲೆ: ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ವಿ. ಚಿಕ್ಕವೀರಯ್ಯ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು. ಸಂಸ್ಥೆ ಕಾರ್ಯದರ್ಶಿ ಡಿ.ಸಿ. ಸುರೇಶ್, ಮುಖ್ಯ ಶಿಕ್ಷಕಿ ವರಲಕ್ಷ್ಮೀ ಹಾಗೂ ಸಹ ಶಿಕ್ಷಕಿ ಗೀತಾ ಉಪಸ್ಥಿತರಿದ್ದರು.
ಕಾವೇರಿ ಸಾಂಸ್ಕೃತಿಕ ವೇದಿಕೆ: ಮಹಾಲಕ್ಷ್ಮೀ ಬಡಾವಣೆಯ ಕಾವೇರಿ ಅಪಾರ್ಟ್‌ಮೆಂಟ್‌ನ ಕಾವೇರಿ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಕಾವೇರಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಗೌರವಾಧ್ಯಕ್ಷ ಗುರುಮೂರ್ತಿ, ಸದಸ್ಯ ಪ್ರಕಾಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಕಿ ಅನುರಾಧ ಸ್ವಾತಂತ್ರ್ಯೋತ್ಸವ ಕುರಿತು ಮಾತನಾಡಿದರು. ಚಂದ್ರಪ್ಪ, ಕೀರ್ತಿ ನಾರಾಯಣ ಶಾಸ್ತ್ರೀ, ಅನಿತಾ ಸುನೀಲ್, ತಾರಾ ಶರ್ಮ, ಜ್ಯೋತಿ ಗಣೇಶ್ ಶೆಣೈ, ನಿರ್ಮಲಮ್ಮ ಚಂದ್ರಪ್ಪ ಇನ್ನಿತರರಿದ್ದರು. ಶೋಭಾ ಮತ್ತು ಡಾ. ಅಶ್ವಿನಿ ನಾಡಗೀತೆ ಹಾಡಿದರು. ವೇದಿಕೆ ಪ್ರಧಾನ ಕಾರ್ಯದರ್ಶಿ ದಿನೇಶ್ ಸ್ವಾಗತಿಸಿದರು.
ನಿಂಚನ ಪಬ್ಲಿಕ್ ಸ್ಕೂಲ್: ಶಾಲಾ ಆವರಣದಲ್ಲಿ ಸ್ವಾತಂತ್ರ್ಯ ದಿನ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 223ನೇ ಜನ್ಮದಿನವನ್ನು ಆಚರಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಚಂದ್ರಕಲಾ ಎಸ್. ನಿಂಗಪ್ಪ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್. ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲೆ ಶೃತಿ ಇನಾಂದಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ/ಬೀರಲಿಂಗೇಶ್ವರ ಪ.ಪೂ. ಕಾಲೇಜು: ಸಂಯುಕ್ತಾಶ್ರಯದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 223ನೇ ಜನ್ಮದಿನವನ್ನು ಆಚರಿಸಲಾಯಿತು. ಸಂಘದ ಉಪಾಧ್ಯಕ್ಷ ಹಾಲೇಕಲ್ ಎಸ್.ಟಿ. ಅರ ವಿಂದ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಎಸ್.ಹೆಚ್. ಪ್ರಕಾಶ್, ಪ್ರಾಂಶುಪಾಲ ರಾಜಶೇಖರ್ ಮತ್ತು ನಿರ್ದೇಶಕರುಗಳಾದ ಬಿ. ಲಿಂಗರಾಜ್, ಸಿದ್ದಪ್ಪ ಅಡಾಣಿ, ಹೆಚ್.ವೈ. ಶಶಿಧರ್, ಎಸ್.ಬಿ. ಗಿರೀಶ್ ಮತ್ತಿತರರು ಹಾಜರಿದ್ದರು.
ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ: ಕಾಲೇಜು ಪ್ರಾಂಶುಪಾಲ ಡಾ. ವೈ. ವಿಜಯ ಕುಮಾರ್ ಧ್ವಜಾರೋಹಣ ನೆರವೇರಿಸಿ ದರು. ಕಾಲೇಜು ಆಡಳಿತ ಮಂಡಳಿ ಪ್ರತಿ ನಿಧಿ ವೈ.ಯು. ಸುಭಾಶ್ ಚಂದ್ರ, ಕಾರ್ಯ ಕ್ರಮ ಸಂಯೋಜಕ ಹೆಚ್.ಎಸ್. ಓಂಕಾ ರಪ್ಪ, ದೈಹಿಕ ಶಿಕ್ಷಕ ಜಿ.ಬಿ. ಅಜ್ಜಯ್ಯ, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಪ್ರಾಧ್ಯಾಪಕ ವರ್ಗದವರು ಮತ್ತು ಸಿಬ್ಬಂದಿವರ್ಗದವರು ಹಾಜರಿದ್ದರು. ಭೌತಶಾಸ್ತ್ರ ವಿಭಾಗದ ಅಧ್ಯಾಪಕಿ ನಾಗಲಕ್ಷ್ಮೀ ವಂದೇ ಮಾತರಂ ಹಾಡು ಪ್ರಸ್ತುತ ಪಡಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಬಿಂದು ಸ್ವಾಗತಿಸಿದರು.
ಸೋಮೇಶ್ವರ ವಿದ್ಯಾಲಯ: ದೇಶದ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾ ಯಿತು. ಸಂಸ್ಥೆ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್ ಮಾತನಾಡಿದರು.
ದಾರುಲ್ ಉಲೂಮ್ ರಜಾವಲ್ ಮುಸ್ತಫಾ ವ ದಾರುಲ್ ಯತಾಮಾ ಅನಾ ಥಾಶ್ರಮ: ಸಂಸ್ಥೆ ಸದಸ್ಯ ಹಫೀಜ್ ಅಮೀನ್ ಧ್ವಜಾರೋಹಣ ನೆರವೇರಿಸಿದರು. ಮೌಲಾನಾ ಅಬ್ದುಲ್ ಮುನಾಫ್, ಮೌಲಾನಾ ಮೊಹಮ್ಮದ್ ರಜಾ ಖಾದ್ರಿ, ಮೌಲಾನಾ ಅಲಿ ರಜಾ, ಮೌಲಾನಾ ಅಲೇ ರಜಾ, ಮೌಲನಾ ರಿಯಾಜ್ ಖಾದರ್ ಬಾಷಾ, ಅಬ್ದುಲ್ ಮುನಾಫ್ ಇನ್ನಿತರರಿದ್ದರು.
ಜ್ಞಾನದೀಪ ಪಬ್ಲಿಕ್ ಸ್ಕೂಲ್: ಸಂಸ್ಥೆ ಕಾರ್ಯದರ್ಶಿ ಕೆ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕರುಗಳಾದ ಬಿ.ಎಸ್. ಗಿರಿಯಾಚಾರ್. ಕೆ. ಪ್ರಭು ಆಗಮಿಸಿದ್ದರು. ನಿವೃತ್ತ ಕನ್ನಡ ಶಿಕ್ಷಕರು, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರೂ ಆದ ಕೆ.ಎನ್. ಸ್ವಾಮಿ ಧ್ವಜಾರೋಹಣ ನೆರವೇರಿಸಿದರು.ಅಧ್ಯಕ್ಷತೆಯನ್ನು ಕೆ. ಬಸವರಾಜಪ್ಪ ವಹಿಸಿ ಮಾತನಾಡಿದರು. ಬಿ.ಎಸ್. ಗಿರಿಯಾಚಾರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ವಂದಿಸಿದರು. ಶಿಕ್ಷಕಿಯರಾದ ಎಂ. ಕವಿತ, ಗಿರಿಜಾ ಕಬ್ಬೂರು, ದಿವ್ಯ, ಉಮಾ, ನಿರ್ಮಲಾ ಇನ್ನಿತರರು ಸಹಕಾರ ನೀಡಿದರು.
ಕನ್ನಡ ಸಮರ ಸೇನೆ: ಸಂಘಟನೆಯ ರಾಜ್ಯಾಧ್ಯಕ್ಷೆ ದ್ರಾಕ್ಷಾಯಮ್ಮ ಮಲ್ಲಿಕಾರ್ಜು ನಯ್ಯ ಮತ್ತು ಹೆಚ್.ಆರ್. ಜಯಲಕ್ಷ್ಮೀ ಅತ್ತಿಗೆರೆ ಮಂಜುನಾಥ್ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ರಾಜ್ಯ ಮಹಿಳಾ ಅಧ್ಯಕ್ಷರುಗಳಾದ ರಾಜೇಶ್ವರಿ ಉಮೇಶ್, ದೀಪ ಜೀವರಾಜಯ್ಯ, ಮೇಘಾ ಶಾಂತಯ್ಯ, ರಂಜಿತ ಟಿ.ಎಂ. ಶಿವಯ್ಯ, ಸುಧಾ ಶಾಂತರಾಜ್, ಅಂಬಿಕಾ ದೇವೇಂದ್ರಚಾರ್, ಕಾವ್ಯ ವಿಜಯಕುಮಾರ್, ಸಾವಿತ್ರಿ ಬಾಯಿ, ಸುವರ್ಣಮ್ಮ, ಇಂದ್ರಮ್ಮ ರುದ್ರಪ್ಪ, ಕಮಲಾಕ್ಷಿ ಪ್ರಭು, ಕೆ. ಕವಿತಾ, ಸುಮಾ ಸಾಯಿನಾಥ್, ಶಿವಲಿಂಗಮ್ಮ, ರೇಣುಕಮ್ಮ, ಬಿ. ರಹಜಾನ್, ಬಿ. ರಜಾಯಿದ್, ಸಾವಿತ್ರಮ್ಮ, ನೇಹಾ ಕೌಸರ್, ಬಿ. ಶಂಷದ್, ರೂಪಾ, ಲತಾ ಕಲ್ಲೇಶ್, ಶಾಂತ, ನಾಗಮ್ಮ, ದುರ್ಗಾಶ್ರೀ, ಸೋಮಶೇಖರಯ್ಯ, ಜಿ.ಎಸ್. ಅಮೂಲ್ಯ, ಜಿ.ವಿ. ಸಿಂಚನ ಇನ್ನಿತರರು ಇದ್ದರು.
ಹೊಂಡದ ಸರ್ಕಲ್ ಗೆಳೆಯರ ಬಳಗ: ಪಾಲಿಕೆ ಸದಸ್ಯ ವಿನಾಯಕ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸೋಮಶೇಖರ್, ಶಿವಣ್ಣ, ಸಂಗಮೇಶಿ, ಮಲ್ಲೇಶ್, ಬಸವರಾಜ್ ಇನ್ನಿತರರು ಹಾಜರಿದ್ದರು.
ಡಾ. ಬಿ.ಎಂ.ಟಿ. ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ: ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯ ದರ್ಶಿ ಬಿ.ಹೆಚ್. ವೀರಭದ್ರಪ್ಪ ಧ್ವಜಾರೋ ಹಣ ನೆರವೇರಿಸಿದರು. ಜಂಟಿ ಕಾರ್ಯ ದರ್ಶಿ ಡಿ. ಗಂಗಾಧರಪ್ಪ ಅಧ್ಯಕ್ಷತೆ ವಹಿಸಿ ದ್ದರು. ಅತಿಥಿಗಳಾಗಿ ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರುಗಳಾದ ಎ.ಕೆ. ನಾಗಪ್ಪ ಹಾಗೂ ಉಚ್ಚೆಂಗಪ್ಪನವರು ಭಾಗ ವಹಿಸಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಜಿ.ಬಿ. ಪರಮೇಶ್ವರಪ್ಪ ಸ್ವಾಗತಿಸಿದರು. ಹಿ.ಪ್ರಾ. ಶಾಲೆ ಸಹ ಶಿಕ್ಷಕ ಎನ್.ಎಸ್. ಆನಂದಯ್ಯ ವಂದಿಸಿದರು. ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ಎಂ.ಎಸ್. ಅಗಡಿ ನಿರೂಪಿಸಿದರು.
ಪೊದಾರ್ ಇಂಟರ್‌ನ್ಯಾಷನಲ್ ಸ್ಕೂಲ್: ಪೊದಾರ್ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ರಮೇಶ್ ಚಂದ್ರ ಪಾಂಡ ಅವರು ಧ್ವಜಾರೋಹಣ ನಡೆಸಿದರು. ಸ್ವಾತಂತ್ರ್ಯೋತ್ಸವ ಅಂಗವಾಗಿ ಮಕ್ಕಳಿಗೆ ವೇಷಭೂಷಣ ಹಾಗೂ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಪ್ರಾಥಮಿಕ ವಿಭಾಗದ ಪ್ರಾಂಶುಪಾಲರಾದ ಮೊನಾಲಿಸಾ ಸಿಂಗ್ ದೇಶಭಕ್ತಿ ಗೀತೆ ಹಾಡಿದರು.
ಶಿರಮಗೊಂಡನಹಳ್ಳಿ
ಅನ್‌ಮೋಲ್ ವಿದ್ಯಾಸಂಸ್ಥೆ: ಅನ್ ಮೋಲ್ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಂ. ಉಮೇಶ್ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ತರಗತಿವಾರು ಸ್ವಾತಂತ್ರ್ಯ ದಿನ ಆಚರಿಸಿದ್ದು, ವಿಶೇಷವಾಗಿತ್ತು. ಅನ್‌ಮೋಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಯು. ಕೊಟ್ರೇಶ್, ಆಡಳಿತಾಧಿಕಾರಿ ವಿಜಯ್, ಅಕೌಂಟೆಂಟ್ ದತ್ತಾತ್ರೇಯ, ದೈಹಿಕ ಶಿಕ್ಷಕ ಎಂ. ಸಂಗಪ್ಪ, ಕಂಪ್ಯೂಟರ್ ಕಿರಣ್ ಹಾಜರಿದ್ದರು.
ಆವರಗೆರೆ
ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆ: ಸಂಸ್ಥೆ ಗೌರವ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಂತಹ ಪರಿಸ್ಥಿತಿಯಲ್ಲೂ ನಮ್ಮ ದೇಶದ ಘನತೆಯನ್ನು ಕಾಪಾಡೋಣ ಎಂದು ತಿಳಿಸಿದರು. ಸಂಸ್ಥೆ ನಿರ್ದೇಶಕಿ ಸುಗ್ಗಲಾದೇವಿ ಮತ್ತಿತರರು ಉಪಸ್ಥಿತರಿದ್ದರು.