ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಕುರ್ಕಿ ನಾಮಪತ್ರ

ದಾವಣಗೆರೆ, ಮಾ.29- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಿಕ್ಷಕ ಶಿವಕುಮಾರ ಕುರ್ಕಿ ಇಂದು ತಮ್ಮ ಬೆಂಬಲಿಗರೊಂದಿಗೆ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿ ಕಾರಿಗಳಾದ ತಹಸೀಲ್ದಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ಟಿ. ರವಿ, ಎಂ. ರಾಜ ಶೇಖರಯ್ಯ ಸಿರಿಗೆರೆ, ಜಿ.ಹೆಚ್. ಶಿವಮೂರ್ತಿ ಗೋಣಿವಾಡ, ಗುರುಸ್ವಾಮಿ ಬಿಸ್ತುವಳ್ಳಿ, ಶಿವಕುಮಾರಸ್ವಾಮಿ ಆನೆಕೊಂಡ, ರೇವಣಸಿದ್ದಯ್ಯ ಅಗಸಕಟ್ಟೆ, ಟಿ.ಎಸ್. ರಾಘವೇಂದ್ರ, ಹೆಚ್.ಕಲ್ಲನಗೌಡ ಬಿಸ್ತುವಳ್ಳಿ, ಬಿ.ಸಿ. ಮಂಜುನಾಥ, ಹೆಚ್.ಕೆ. ರಾಜು, ಶಿವಬಸವಾರಾಧ್ಯ ಸ್ವಾಮಿ, ಎಂ.ಆರ್. ಮಂಜುಳಾ ಕುರ್ಕಿ, ಸ್ವರ್ಣ ಗೌರಿ ಇದ್ದರು.

ಕನ್ನಡದ ಸೇವೆ ವಿಕೇಂದ್ರೀ ಕರಣಕ್ಕೆ ಒತ್ತು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಮ್ಮೇಳನ ಮತ್ತು ದತ್ತಿನಿಧಿಗಳ ಸ್ಥಾಪನೆಗೆ ಸೀಮಿತವಾಗಿದೆ. ಆದರೆ, ಕನ್ನಡಿಗರನ್ನು ಕರೆ ತರುವ ಕೆಲಸ ಮಾಡಿಲ್ಲ. ಕೇವಲ ಜಿಲ್ಲಾ,
ತಾಲ್ಲೂಕು ಪ್ರದೇಶ ಗಳಿಗೆ ಸೀಮಿತವಾಗಿದ್ದು, ಗ್ರಾಮ ಮಟ್ಟದಲ್ಲಿ ಪರಿಷತ್ ಘಟಕ ಇಲ್ಲ  ಎಂದು ಶಿವಕುಮಾರ್ ಕುರ್ಕಿ ತಿಳಿಸಿದ್ದಾರೆ.

ಕನ್ನಡದ ಸೇವೆ ವಿಕೇಂದ್ರೀಕರಣ ಆಗಬೇಕಿದೆ. ಪ್ರತಿಯೊಬ್ಬ ಕನ್ನಡಿಗರು ಭಾವಹಿಸುವ ಕೆಲಸ ಮಾಡಬೇಕಿದೆ. 

ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರು, ಕಾರ್ಮಿಕರನ್ನು ಕನ್ನಡ ಸಾಹಿತ್ಯ ಪರಿಷತ್‍ ಗೆ ಕರೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಪರಿಷತ್‍ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆವಿರೋಧ ಆಯ್ಕೆ ಆಗಬೇಕಿತ್ತು. ಕನ್ನಡ ಸೇವೆ ಮಾಡಲು ಜನರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆಂದರು.

error: Content is protected !!