ಹರಪನಹಳ್ಳಿ, ಮಾ.27- ತಾಲ್ಲೂಕಿನ ಜೆಎಂಎಫ್‌ಸಿ ಹಿರಿಯ ಮತ್ತು ಕಿರಿಯ ನ್ಯಾಯಾಲಯದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಮೆಗಾ ಲೋಕ್ ಅದಾಲತ್‍ನಲ್ಲಿ ಹಿರಿಯ ಮತ್ತು ಕಿರಿಯ ನ್ಯಾಯಾಲಯದಿಂದ ಒಟ್ಟು 1,20,93,576 ರೂಪಾಯಿಗಳ ಮೊತ್ತವನ್ನು ರಾಜೀ ಸಂಧಾನದ ಮೂಲಕ ಕಕ್ಷಿದಾರರು ಪಡೆದಿರುತ್ತಾರೆ.
ಒಟ್ಟು ನ್ಯಾಯಾಲಯದ ಪೆಂಡಿಂಗ್ ಪ್ರಕರಣಗಳು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಅವರ ನೇತೃತ್ವದ ಪೀಠವು 169 ಪ್ರಕರಣಗಳ ಪೈಕಿ 64 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 80.31,692 ರೂಪಾಯಿಗಳನ್ನು ಸಂಬಂಧಿಸಿದ ಕಕ್ಷಿದಾರರು ಪಡೆದಿರುತ್ತಾರೆ.
ಕಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶೆ ಬಿ.ಜಿ. ಶೋಭಾ ಅವರ ನೇತೃತ್ವದ ಪೀಠವು ಒಟ್ಟು 679 ಪ್ರಕರಣಗಳ ಪೈಕಿ 227 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 40,61,884 ರೂಪಾಯಿ ಮೊತ್ತ ಕಕ್ಷಿದಾರರಿಗೆ ಸಂದಾಯವಾಗಿದೆ.
ಬ್ಯಾಂಕಿನಿಂದ ಸಾಲ ಪಡೆದಿರುವ ಸಾರ್ವಜನಿಕರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಸಾರ್ವಜನಿಕ ನ್ಯಾಯಾಲಯದಿಂದ ಸಮನ್ಸ್ ನೋಟಿಸ್ ಕಳಿಸಿ ಸಾಲ ಇರುವ ಬ್ಯಾಂಕಿನ ವ್ಯವಸ್ಥಾಪಕರಿಂದ ಮಾಹಿತಿ ಪಡೆದುಕೊಂಡು ಸಂಬಂಧಪಟ್ಟ ಸಾಲಗಾರರಿಗೆ ನೋಟಿಸ್ ಕಳುಹಿಸಿ, ಲೋಕ ಅದಾಲತ್‍ನ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಸುವರ್ಣ ಅವಕಾಶವಿದೆ. ಅವಕಾಶಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ಪ್ರಕರಣದಿಂದ ಮುಕ್ತರಾಗಬೇಕು ಎಂದು ಸಾರ್ವಜನಿಕರಲ್ಲಿ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳು ಹೇಳಿದರು.
ಈ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ಅಪರ ಸರ್ಕಾರಿ ವಕೀಲ ಕಣವಿಹಳ್ಳಿ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರೇಗೌಡ್ರು, ಉಪಾಧ್ಯಕ್ಷ ಟಿ. ವೆಂಕಟೇಶ್, ವಕೀಲರುಗಳಾದ ಗಂಗಾಧರ ಸಿ. ಗುರುಮಠ್, ಎಸ್.ಎಂ. ರುದ್ರಮುನಿ, ಕೋಡಿಹಳ್ಳಿ ಪ್ರಕಾಶ, ವಿ.ಜಿ. ಪ್ರಕಾಶ್ ಗೌಡ, ಜೆ. ಸೀಮಾ, ಮೃತ್ಯುಂಜಯ, ಅಸ್ಲಾಂ, ಮುಜೀಬ್ ರಹಿಮಾನ್, ಬಿ.ಗೋಣಿಬಸಪ್ಪ, ಬಾಗಳಿ ಮಂಜುನಾಥ, ಎ.ಎಲ್. ರೇವಣ ಸಿದ್ದಪ್ಪ, ಬೇಲೂರು ಸಿದ್ದೇಶ್, ಡಿ. ಹನುಮಂತಪ್ಪ, ನಂದೀಶ್ ನಾಯ್ಕ, ರವಿಶಂಕರ್ ಇನ್ನಿತರರಿದ್ದರು.