ಮಿಶ್ರಬೆಳೆ ಪದ್ಧತಿಯಿಂದ ಅನುಕೂಲ

ಜಗಳೂರು ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಆ.16- ರೈತರು ಮಿಶ್ರ ಬೆಳೆ ಪದ್ಧತಿ  ಅಳವಡಿಸಿಕೊಂಡರೆ  ಒಳ್ಳೆಯದು ಹಾಗೂ  ಬೆಳೆಗಳಿಗೆ ಸುರ ಕ್ಷಿತ ಕೀಟನಾಶಕ ಸಿಂಪಡನೆಗೆ ಮುಂದಾ ಗಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ಸಲಹೆ ನೀಡಿದರು.

ತಾಲ್ಲೂಕಿನ ಮರೇನಹಳ್ಳಿ ಗ್ರಾಮ ದಲ್ಲಿ  ಕೃಷಿ ಇಲಾಖೆಯಿಂದ ಹಮ್ಮಿ ಕೊಂಡಿದ್ದ ಸಸ್ಯ ಸಂರಕ್ಷಣಾ ಯೋಜನೆ ಯಡಿ ಸುರಕ್ಷಿತ ಕೀಟನಾಶಕ ಬಳಕೆ ಮತ್ತು ಬೀಜೋಪಚಾರ ಆಂದೋಲನ ಕುರಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಮೀನುಗಳಲ್ಲಿ ಸ್ವಾಭಾವಿಕವಾಗಿ ಎರೆಹುಳುಗಳು ಕಂಡುಬರುತ್ತಿದ್ದವು. ಇತ್ತೀಚಿಗೆ ಕೀಟನಾಶಕಗಳ ಬಳಕೆಯಿಂದ ಎರೆಹುಳುಗಳು ಅವನತಿಯತ್ತ ಸಾಗಿದ್ದು, ನರೇಗಾದಡಿ ಎರೆಹುಳು ಸಾಕಾಣಿಕೆ ತೊಟ್ಟಿ‌ ನಿರ್ಮಿಸಿ, ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪೂರ್ವಜರು  ಸ್ವತಃ ಮನೆಗಳಲ್ಲಿ ತೊಗರಿ ಸೇರಿದಂತೆ ಇತರೆ ಅಕ್ಕಡಿ ಬೆಳೆಗಳ ಬೀಜಗಳನ್ನು ತಯಾರಿಸುತ್ತಿದ್ದರು. ಮೆಕ್ಕೆಜೋಳ ಬೆಳೆಗೆ ಮಾರುಹೋಗಿ ಅಕ್ಕಡಿ ಬೆಳೆಗಳು ಮಾಯವಾಗುತ್ತಿವೆ. ರೈತರು ಇಲಾಖೆಗಳ ಸಲಹೆ ಪಡೆದು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ಯೋಜನೆಗಳನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು. ಜಮೀನಿನಲ್ಲಿನ ಬೆಳೆ ಮಾಹಿತಿಯನ್ನು ಬೆಳೆ ಸಮೀಕ್ಷೆ ಆಪ್‌ ಬಳಸಿ ಅಪ್ ಲೋಡ್ ಮಾಡಬೇಕು  ಎಂದರು.

ಉಪನಿರ್ದೇಶಕ ಆರ್. ತಿಪ್ಪೇಸ್ವಾಮಿ ಮಾತನಾಡಿ, ತೊಗರಿ ಸಸ್ಯದ ಕುಡಿ ಚಿವುಟಿದರೆ ಅಂತರ ಕಾಪಾಡಿಕೊಂಡು ಹೂ, ಮೊಗ್ಗು, ಧಾನ್ಯಗಳು ಮಾರ್ಪಟ್ಟು 6 ತಿಂಗಳ ಬೆಳೆ ಉತ್ತಮ ಇಳುವರಿ ಸಾಧ್ಯ.  ಸೊರಗು ರೋಗ ಆಕ್ರಮಿಸಿದರೆ ಅಂತಹ ಗಿಡವನ್ನು ಕಿತ್ತು ಹಾಕಬೇಕು ಎಂದು ಮಾಹಿತಿ ನೀಡಿದರು‌.

ತೊಗರಿ ಬೆಳೆಯ  ಸಸ್ಯದ ಕುಡಿಯನ್ನು ಇಲಾಖೆಗಳಿಂದ ನೀಡಿದ ಸೋಲಾರ್ ಯಂತ್ರದ ಮೂಲಕ ಕಟ್ ಮಾಡಿದರೆ  ಉತ್ತಮ ಇಳುವರಿ ಪಡೆಯಬಹುದು ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು ಮಾಹಿತಿ ನೀಡಿ, ಅಕ್ಕಡಿ ಬೆಳೆಗಳಲ್ಲಿ ತೊಗರಿ ಬೆಳೆ ಫಸಲಿಗೆ ಆಗಮಿಸಿದಾಗ ಕಾಯಿ, ಹೂ ಬಿಡುವ ವೇಳೆ ಎರಡು ಭಾಗಗಳ ಕಿಷ್ಕಿಂಧೆಯಲ್ಲಿ ಬೆಳೆದು ಇಳುವರಿ ಕಡಿಮೆಯಾಗದಂತೆ ಈ ರೀತಿ ತುದಿಯನ್ನು ಕಟಾವು ಮಾಡಲು ರೈತರು ಮುಂದಾಗಬೇಕು. ಆಗ  ಹೆಚ್ಚಾಗಿ ಲಾಭ ಗಳಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ನಾಗವೇಣಿ, ಪ.ಪಂ. ಅಧ್ಯಕ್ಷ ಆರ್ . ತಿಪ್ಪೇಸ್ವಾಮಿ, ಸದಸ್ಯ ನವೀನ್, ಗ್ರಾ.ಪಂ. ಅಧ್ಯಕ್ಷ ತಿಪ್ಪೇಸ್ವಾಮಿ, ದೇವೇಂದ್ರಪ್ಪ, ಸದಸ್ಯರಾದ ಶ್ವೇತಾ, ತಿಪ್ಪೇಸ್ವಾಮಿ, ಹಿರಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ತಾ.ಪಂ. ಇಓ ಲಕ್ಷ್ಮೀಪತಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಕೃಷಿ ಇಲಾಖೆಯ ಹರ್ಷ, ಪಿಡಿಒ ಮೂಗಣ್ಣ  ಹಾಗೂ ರೈತರು ಭಾಗವಹಿಸಿದ್ದರು.

error: Content is protected !!