ಕೊಮಾರನಹಳ್ಳಿಯಲ್ಲಿ ಕ್ರಿಕೆಟ್‍ ಟೂರ್ನಿಗೆ ಚಾಲನೆ

ಮಲೇಬೆನ್ನೂರು, ಮಾ.28 – ಕೊಮಾರನಹಳ್ಳಿ ಗ್ರಾಮದಲ್ಲಿ ಫ್ರೆಂಡ್ಸ್‍ ಕ್ರಿಕೆಟರ್ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ 3 ದಿನಗಳ ಟೆನ್ನಿಸ್‍ ಬಾಲ್ ಕ್ರಿಕೆಟ್‍ ಟೂರ್ನಿಯನ್ನು ಶನಿವಾರ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‍ ಸ್ವಾಮಿ ಉದ್ಘಾಟಿಸಿದರು.

ನಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್‍ ಬ್ಯಾಟಿಂಗ್‍ ಮಾಡುವ ಮೂಲಕ್ ಆಟಕ್ಕೆ ಚಾಲನೆ ನೀಡಿದರು.

ಹಾಲಿವಾಣ ಗ್ರಾ.ಪಂ. ಅಧ್ಯಕ್ಷ ಐ.ಪಿ. ರಂಗನಾಥ್‍, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್‍, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಗ್ರಾ.ಪಂ. ಸದಸ್ಯರಾದ ಶ್ರೀಮತಿ ನೇತ್ರಾವತಿ ಹನುಮಂತ, ಐರಣಿ ಮಹೇಶ್ವರಪ್ಪ, ಮಲೇಬೆನ್ನೂರು ಪುರಸಭೆಯ ನಾಮಿನಿ ಸದಸ್ಯ ಪಿ.ಆರ್‍. ರಾಜು, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಬಿ.ಮಂಜುನಾಥ್, ಫ್ರೆಂಡ್ಸ್‍ ಕ್ರಿಕೆಟರ್ನ ಸುನೀಲ್, ಹಾಲೇಶ್, ಚಿದು, ಚೇತನ್‍ ಮತ್ತಿತರರು ಈ ವೇಳೆ ಹಾಜರಿದ್ದರು.

ಸೋಮವಾರ ಸಂಜೆ ಸಮಾರೋಪ ಹಾಗೂ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

error: Content is protected !!