ವಿಶ್ವ ವನ, ಜಲ ಮತ್ತು ವಾತಾವರಣ ದಿನ

ರಾಣೇಬೆನ್ನೂರು, ಮಾ.26- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ವನ, ಜಲ ಮತ್ತು ವಾತಾವರಣ ದಿನವನ್ನು ಆಚರಿಸಲಾಯಿತು. 

ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಿ.ಬಿ. ಕುಂಬಾರ ಮಾತನಾಡಿ, ಪ್ರತಿಯೊಬ್ಬರು ತಮ್ಮ ಆದ್ಯ ಕರ್ತವ್ಯವೆಂದು ತಿಳಿದು ಗಿಡ, ಮರ ಬೆಳೆಸಿ ಜಲ ಸಂರಕ್ಷಣೆ ಮಾಡಿದರೆ ಮಾತ್ರ ಭೂಮಿ ಮೇಲೆ ನೆಮ್ಮದಿ, ಆರೋಗ್ಯ ಜೀವನ ನಡೆಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೊ. ಲಿಂಗರಾಜ ಸಂಗಳದ  ಮಾತನಾಡಿ, ಪರಿಸರ ವಿಲ್ಲದೆ ನಾವಿಲ್ಲ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು. 

ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿ.ವಿ. ಕುರ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಐ.ಒ. ಪೂಜಾರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಪ್ರೊ. ಎಸ್.ಬಿ. ಪಾಟೀಲ, ಎ.ಬಿ. ಕುಮಾರ, ಡಾ. ವೆಂಕಟೇಶ ಪ್ರೊ. ಅಯ್ಯನ ಗೌಡ್ರು  ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿ ದ್ದರು. ಗೀತಾ ಕೋಟೆಣ್ಣನವರು ವಂದಿಸಿದರು.

error: Content is protected !!