ಕೂಡ್ಲಿಗಿ, ಮಾ.26- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿಯಾಗಿ ಚಿಕ್ಕಜೋಗಿಹಳ್ಳಿಯ ಜೆ.ಎ. ಧರ್ಮೇಂದ್ರ ನಾಯಕ್ ಅವರನ್ನು ನೇಮಕ ಮಾಡಲಾಗಿದೆ ಎಂದು ವಿಭಾಗದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ. ಕೆಪಿಸಿಸಿ ಸದಸ್ಯರು, ಕಾಂಗ್ರೆಸ್ ಜನಪ್ರತಿನಿಧಿಗಳು, ಕಾರ್ಯಕರ್ತರು ಧರ್ಮೇಂದ್ರ ನಾಯಕ್ ಅವರಿಗೆ ಶುಭ ಕೋರಿದ್ದಾರೆ.
January 7, 2025