ದಾವಣಗೆರೆ, ಆ.5- ಏ ಆಟೋ ನೀನ್ ಅಲ್ಲೇ ಸೈಡ್ ಇರಪ್ಪ, ನೀವು ಸ್ವಲ್ಪ ಗಾಡಿ ಮುಂದೆ ಬಿಡ್ರಿ…. ಆ ಬಸ್‌ನ ಅಲ್ಲೇ ನಿಲ್ಲಿಸ್ರಪ್ಪ. ಸಾರ್ ಪೊಲೀಸ್ರೇ ನೀವು ಅಲ್ಲಿ ಸರ್ಕಲ್ ಹತ್ತಿರ ಟ್ರಾಫಿಕ್ ಕಂಟ್ರೋಲ್ ಮಾಡಿ, ನಾವು ಇಲ್ಲಿ ನೋಡ್ಕೋತೀವಿ. ಅಲ್ರಿ ನಿಮ್ಗೆ ಮನುಷ್ಯತ್ವ ಇದೆಯೇನ್ರೀ ಅಲ್ಲಿ ಹಿಂದ್‌ಗಡೆ ಆಂಬ್ಯುಲೆನ್ಸ್ ಬಂದಿದೆ ದಾರಿ ಬಿಡ್ರಿ ಮೊದ್ಲು.
ಇವೆಲ್ಲವೂ ಸಂಚಾರಿ, ಪಾದಚಾರಿ, ಸಮಾಜ ಸೇವಕರ ಮಧ್ಯೆ ಟ್ರಾಫಿಕ್ ಸಂಬಂಧ ನಡೆದ ಜುಗಲ್‌ಬಂದಿಯ ಹೈಲೈಟ್ಸ್‌ಗಳು. ಅದೂ ಕೆ.ಆರ್. ರಸ್ತೆಯ ಅರಳಿ ಮರದ ಬಳಿ.
ಸುಮಾರು 4 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿ ಸಂಚಾರಿಗಳು ತಮ್ಮ ಗುರಿ ತಲುಪಲು ಹರ ಸಾಹಸ ಪಡಬೇಕಾ ಯಿತು. ಇದರ ಮಧ್ಯೆ… ಕಾರ್ಯನಿರ್ವಹಿಸು ತ್ತಿದ್ದ ಪೊಲೀಸ್ ಪೇದೆ ತನ್ನ ಪ್ರಯತ್ನ ಮೀರಿ ಕಂಟ್ರೋಲ್ ಮಾಡಿದರೂ ಸಹ ಪ್ರಯತ್ನ ವಿಫ ಲವಾದ ಸಂದರ್ಭದಲ್ಲಿ ಆಟೋ ಚಾಲಕರು, ಸಮಾಜ ಸೇವಕರು, ರಸ್ತೆ ಬದಿಯ ಅಂಗಡಿಗಳ ಹುಡುಗರು ಸ್ವಯಂ ಪ್ರೇರಣೆಯಿಂದ ಮುಂದಾಗಿ ಈಗಾಗಲೇ ಸಂಚಾರಿ ಪೊಲೀಸ್ ವತಿಯಿಂದ ಒಮ್ಮುಖ ರಸ್ತೆ, ಅಡ್ಡರಸ್ತೆಗಳ ಬಳಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಮಾಡಿದರು.
ಆದರೂ ಅಡ್ಡಾದಿಡ್ಡಿ ವಾಹನಗಳು ಬಂದು ನಿಂತಾಗ ಟ್ರಾಫಿಕ್ ಜಾಮ್ ಆಗಲಿದ್ದು, ಇಂತಹ ಸಂದರ್ಭದಲ್ಲಿ ಪ್ರಾಣ ರಕ್ಷಿಸಲು ಆಂಬ್ಯುಲೆನ್ಸ್ ಬಂದರೂ ಸಹ ರಸ್ತೆ ಕಾಣದೆ ಟ್ರಾಫಿಕ್ ಮಧ್ಯೆ ಸಿಕ್ಕಿಕೊಂಡಿರುವ ಅನೇಕ ಘಟನೆಗಳು ನಡೆದಿವೆ ಎಂದು ದೂರಿರುವ ಸಾರ್ವಜನಿಕರು ತಮ್ಮಗಳ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎನ್ನುವಂತಾಗಿದ್ದಾರೆ.
ಸ್ಮಾರ್ಟ್ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದ್ದು, ವೆಂಕಟೇಶ್ವರ ವೃತ್ತ (ಗಿರಿ ಟಾಕೀಸ್) ಬಳಿ ಒಳ ಚರಂಡಿ ಹಾಗೂ ಡೆಕ್ ಕಾಮಗಾರಿಯಿಂದ ಆರ್‌ಎಂಸಿ, ಬಂಬೂ ಬಜಾರ್ ರಸ್ತೆ ಬಂದ್ ಆಗಿರುವ ಕಾರಣ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗು ತ್ತಿದೆ. ಸುಮಾರು ದಿನಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದು, ಸೂಕ್ತ ಸಂಚಾರ ವ್ಯವಸ್ಥೆ ಕಲ್ಪಿಸಲು ನಾಗರಿಕರು ಮನವಿ ಮಾಡಿದ್ದಾರೆ.
ಸಂಚಾರಿ ಪೊಲೀಸರ ಪ್ರಯತ್ನಕ್ಕೆ ಸಾಥ್ ನೀಡಿದ ನೂರಾನಿ ಆಟೋಸ್ಟ್ಯಾಂಡ್‌ನ ಆಟೋ ಚಾಲಕರಾದ ರಕೀಬ್, ಅಕ್ರಮ್ ಸೇರಿದಂತೆ ಸಾರ್ವಜನಿಕರು ಜಾಮ್ ಆಗಿದ್ದ ಟ್ರಾಫಿಕ್ ನಿಯಂತ್ರಿಸಲು ಸಹಕರಿಸಿದರು. ಹೀಗಾಗಿ ಪೊಲೀಸರಿಗೆ ಪಬ್ಲಿಕ್ ಸಾಥ್ ನೀಡಿದ್ದು ಉತ್ತಮ ಕಾರ್ಯಕ್ಕೆ ಪುಷ್ಟಿ ನೀಡುವಂತಿತ್ತು. ಆಗ ಟ್ರಾಫಿಕ್ ಸ್ವಲ್ಪ ಮಟ್ಟಿಗೆ ಕಂಟ್ರೋಲ್ ಆಯಿತು.
ಜಿಲ್ಲಾಡಳಿತ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಸಭೆಗಳನ್ನು ನಡೆಸಿ, ಉತ್ತಮ ಸಂಚಾರಕ್ಕೆ ಅನುಕೂಲ ಮಾಡಬೇ ಕೆಂಬ ಚರ್ಚೆಗಳು ಬರೀ ಚರ್ಚೆಯಾಗಿಯೇ ಉಳಿದವು. ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂಬ ಮಾತು ಒಂದೆಡೆಯಾದರೆ, ಹಳೇ ಊರಿನ ಅಂದರೆ ದಕ್ಷಿಣ ಭಾಗದಲ್ಲಿ ಅನೇಕ ರಸ್ತೆಗಳು ಕಿಷ್ಕಿಂಧೆಗಳಾಗಿವೆ ರಸ್ತೆಗಳಾಗಿವೆ. ಇವನ್ನು ಅಭಿವೃದ್ಧಿ ಪಡಿಸಲು ಜನಪ್ರತಿನಿಧಿಗಳು ಮುಂದಾಗಬೇಕೆಂಬ ಸಾರ್ವಜನಿಕರ ಕೋರಿಕೆ ಮತ್ತೊಂದೆಡೆ.
ಪ್ರತಿದಿನ ಜನಗಳ ಜೊತೆ ಜಗಳವಾಡಿ ಕೊಂಡೇ ತಮ್ಮ ಕೆಲಸಗಳನ್ನು ನಿರ್ವಹಿಸಬೇ ಕಾದ ದುಃಸ್ಥಿತಿ ನಮ್ಮದಾಗಿದೆ ಎಂದು ಹೇಳುವ ಆಟೋ ಚಾಲಕರು, ಈ ಭಾಗದಲ್ಲಿ ಸರಿಯಾದ ರಸ್ತೆಗಳು, ಫುಟ್‌ಪಾತ್ ನಿರ್ಮಿಸುವ ಅವಶ್ಯಕತೆ ಇದ್ದು, ಜನಸಂದಣಿಯಿಂದ ಕೂಡಿರುವ ಈ ರಸ್ತೆಗಳಲ್ಲಿ ಒಮ್ಮೊಮ್ಮೆ 2-3 ಗಂಟೆ ಕಾಲ ಇಲ್ಲಿಯೇ ಬೀಡು ಬಿಡಬೇಕಾದಂತಹ ಪರಿಸ್ಥಿತಿ ಒದಗಿಬಂದಿದೆ ಎನ್ನುತ್ತಾರೆ.
– ಬಿ. ಸಿಕಂದರ್, [email protected]