ಸೋಮವಾರ ದಾವಣಗೆರೆ ಜಯದೇವ ವೃತ್ತದ ಬಳಿ ಇರುವ ತಿಂಡಿ ಅಂಗಡಿಯೊಂದರ ಬಳಿ ಉಪಹಾರ ಸೇವಿಸುತ್ತಿರುವ ಗ್ರಾಹಕರು.
ದಾವಣಗೆರೆ, ಜೂ. 28- ಜಿಲ್ಲೆಯಲ್ಲಿ ಲಾಕ್ಡೌನ್ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆವರೆಗೆ ವಹಿವಾಟು ನಡೆಸಲು ಅನುಮತಿ ನೀಡಲಾಗಿತ್ತು.
ಸೋಮವಾರ ನಗರ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ವಾಹನಗಳ ಓಟಾಟ ಹೆಚ್ಚಾಗಿತ್ತು. ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿ ಸಂಜೆ ವರೆಗೂ ನಡೆಯಿತು.
ಗ್ರಾಮೀಣ ಪ್ರದೇಶದ ಜನರೂ ಹೆಚ್ಚಾಗಿ ನಗರಕ್ಕೆ ಧಾವಿಸಿದ್ದರಿಂದ ಮಾರುಕಟ್ಟೆ ಪ್ರದೇಶ ಜನ ಜಂಗುಳಿಯಿಂದ ಕೂಡಿತ್ತು. ಮಾರಾಟ ಹಾಗೂ ಖರೀದಿಗೆ ಅವಧಿ ವಿಸ್ತರಿಸಿದ್ದರಿಂದ ಜನರು ತುಸು ನಿಟ್ಟುಸಿರು ಬಿಟ್ಟಿದ್ದರು.
ಹೋಟೆಲ್ಗಳು, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಶಾಪ್ಗಳು, ಜೆರಾಕ್ಸ್ ಅಂಗಡಿಗಳು, ಫ್ಯಾನ್ಸಿ ಸ್ಟೋರ್ಗಳು ಸೇರಿದಂತೆ ಎಲ್ಲಾ ಅಂಗಡಿಗಳೂ ತೆರೆಯಲ್ಪಟ್ಟಿದ್ದವು. ಹೋಟೆಲ್ಗಳಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಆದರೆ ಸಂಜೆ ಬೀದಿ ಬದಿಯ ತಿಂಡಿ ಅಂಗಡಿಗಳ ಮುಂದೆ ಜನ ಜಮಾಯಿಸಿದ್ದರು.