ಕೊರೊನಾದಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಶೀಘ್ರ ನೆರವು

ಕೆ.ಎನ್.ಹಳ್ಳಿಯಲ್ಲಿ ಸಚಿವ ಭೈರತಿ ಬಸವರಾಜ್, ಸಂಸದ ಸಿದ್ದೇಶ್ವರ ಭರವಸೆ

ಮಲೇಬೆನ್ನೂರು, ಜೂ.28- ಕಡಾರನಾಯ್ಕನಹಳ್ಳಿ ಗ್ರಾಮಕ್ಕೆ ಇಂದು ಸಂಜೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಹಂಚಿನಮನೆ ರೇವಣಪ್ಪ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬದವರಿಗೆ ಸರ್ಕಾರದಿಂದ 1 ಲಕ್ಷ ರೂ. ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ  ಭರವಸೆ ನೀಡಿದ್ದು, ಶೀಘ್ರವೇ ನಿಮ್ಮ ಕೈ ಸೇರಲಿದೆ ಎಂದು ಸಚಿವರು, ಸಂಸದರು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಜಿ.ಪಂ. ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ತಾ.ಪಂ. ಇಒ ಗಂಗಾಧರಪ್ಪ, ಉಪತಹಶೀಲ್ದಾರ್ ಆರ್.ರವಿ, ಸಿಪಿಐ ಸತೀಶ್, ಪಿಎಸ್ಐ ವೀರಬಸಪ್ಪ, ಕಂದಾಯ ನಿರೀಕ್ಷಕ
ಆನಂದ್, ಗ್ರಾಮ ಲೆಕ್ಕಾಧಿಕಾರಿ ಆನಂದತೀರ್ಥ, ಪ್ರಭಾರ ಪಿಡಿಒ ಮಂಜಾನಾಯ್ಕ, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ, ಬಿಜೆಪಿ ಮುಖಂಡರಾದ
ಕೆ.ಹೆಚ್.ನಾಗನಗೌಡ, ಹುಗ್ಗಿ ಮಹಾಂತೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.

ಇದಕ್ಕೂ ಮುನ್ನ ಸಚಿವರು, ಸಂಸದರು, ಅಧಿಕಾರಿಗಳು, ಹನಗವಾಡಿ, ಬೆಳ್ಳೂಡಿ, ಭಾನುವಳ್ಳಿ ಗ್ರಾಮಗಳಿಗೂ ಭೇಟಿ ನೀಡಿ, ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು.

error: Content is protected !!