ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಗೆ ರಾಜ್ಯದಿಂದ ಮಧು ಎ.ಜಿ. ಆಯ್ಕೆ

ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಗೆ ರಾಜ್ಯದಿಂದ ಮಧು ಎ.ಜಿ. ಆಯ್ಕೆ - Janathavaniದಾವಣಗೆರೆ, ಮಾ. 24- ಈಚೆಗೆ ಮೈಸೂರಿ ನಲ್ಲಿ ನಡೆದ 36ನೇ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಮಧು ಎ.ಜಿ. ಮಾಸ್ಟರ್ ವಿಭಾಗ ದಲ್ಲಿ ಭಾಗವಹಿಸಿ 1 ಚಿನ್ನ ಮತ್ತು 1 ಬೆಳ್ಳಿಯ ಪದಕ ಪಡೆದು ರಾಷ್ಟ್ರಮಟ್ಟದ ರೋಲರ್ ಸ್ಕೇ ಟಿಂಗ್ ಚಾಂಪಿಯನ್ ಶಿಪ್‍ಗೆ ಆಯ್ಕೆಯಾಗಿದ್ದಾರೆ. 

ಮಧು ಎ.ಜಿ. ಇವರು ನಗರದ  ರಸಗೊಬ್ಬರದ ವ್ಯಾಪಾರಿ ಅಣಬೇರು ಗಂಗಾಧರ ಇವರ ಪುತ್ರರಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. 

ಮಧು, ಇದೇ ತಿಂಗಳು 31 ರಿಂದ ಏಪ್ರಿಲ್ 10 ರವರೆಗೆ ಚಂಡೀಘಡದ ಮೊಹಾಲಿಯಲ್ಲಿ ನಡೆಯಲಿರುವ 58ನೇ ರಾಷ್ಟ್ರಮಟ್ಟದ ಚಾಂಪಿಯನ್‍ಶಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುತಿದ್ದಾರೆ. ಈ ಹಿಂದೆ 2006ರಲ್ಲಿ ಸೌತ್ ಕೊರಿಯಾದಲ್ಲಿ ನಡೆದ ಅಂತರರಾಷ್ಟ್ರಿಯ ಮಟ್ಟದ ವರ್ಲ್ಡ್ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ಗೆ ಆಯ್ಕೆ ಪಡೆದು ಭಾರತವನ್ನು ಪ್ರತಿನಿಧಿಸಿದ್ದರು.

error: Content is protected !!