ಹರಿಹರ, ಜೂ.27- ಸ್ಥಿತಿವಂತವರು ಬಡವರಿಗೆ ದಾನ ರೂಪದಲ್ಲಿ ನೆರವು ನೀಡುವುದು ಪುಣ್ಯದ ಕೆಲಸ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಎಸ್.ಎಂ. ವೀರೇಶ್ ಅಭಿಮಾನಿ ಬಳಗದಿಂದ ನಗರದಲ್ಲಿ ಮೊನ್ನೆ ಏರ್ಪಾಡಾಗಿದ್ದ ಸವಿತಾ ಸಮಾಜದ ಬಂಧುಗಳು ಮತ್ತು ಕುಂಬಾರ ಸಮಾಜದ ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಅವರು ಮಾತನಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಎನ್. ರಜನಿಕಾಂತ್, ಅಶ್ವಿನಿ ಕೃಷ್ಣ, ಎ.ಕೆ. ಹನುಮಂತಪ್ಪ, ಸುರೇಶ್ ತೆರೆದಹಳ್ಳಿ, ಸಿಪಿಐ ಸತೀಶಕುಮಾರ್, ಮುಖಂಡರಾದ ಬಾತಿ ಚಂದ್ರಶೇಖರ್, ಅಜಿತ್ ಸಾವಂತ್, ರಾಘವೇಂದ್ರ ಕೊಂಡಜ್ಜಿ, ತುಳಜಪ್ಪ ಭೂತೆ, ಹೆಚ್. ಮಂಜಾ ನಾಯಕ್, ಪ್ರವೀಣ್ ಪವಾರ್, ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ಬಾಲರಾಜ್, ತಾಲ್ಲೂಕು ಅಧ್ಯಕ್ಷ ಪಿ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಎಸ್. ಅನಿಲ್ ಕುಮಾರ್ ಕುಂಬಾರ ಸಮಾಜದ ಚಂದ್ರಶೇಖರ್ ಇನ್ನಿತರರಿದ್ದರು.