ಕುಳಗಟ್ಟಿ ರಂಗನಾಥ್
ಹೊನ್ನಾಳಿ, ಮಾ.23- ತಾಲ್ಲೂಕಿನ ಸುಂಕ ದಕಟ್ಟಿ ರಸ್ತೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲ್ಲೂಕು ವಾಲ್ಮೀಕಿ ಸಮಾಜದ ನೂತನ ಅಧ್ಯಕ್ಷ ಕುಳಗಟ್ಟಿ ರಂಗನಾಥ್ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಂಗನಾಥ್ ಸಮಾಜ ಸಂಘಟನೆ ಹಾಗೂ ಅಭಿ ವೃದ್ಧಿ ವಿಚಾರದಲ್ಲಿ ಒಗ್ಗಟ್ಟು ಹಾಗೂ ವಿಶ್ವಾಸ ದಿಂದ ಕಾರ್ಯ ನಿರ್ವಹಿಸಿಕೊಂಡು ಹೋಗಲು ಸರ್ವ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.
ಸಂಘಟನೆ ಜೊತೆಗೆ ವಾಲ್ಮೀಕಿ ಭವನದ ಉಳಿದ ಕಾರ್ಯವನ್ನು ಪೂರ್ಣಗೊಳಿಸಬೇಕು ಹಾಗೂ ಸಮಾಜದಲ್ಲಿ ಯಾವುದೇ ಪಕ್ಷ ಹಾಗೂ ರಾಜಕೀಯಕ್ಕೆ ಅವಕಾಶ ನೀಡದೆ, ಮಾಜಿ ಅಧ್ಯಕ್ಷರು ಹಾಗೂ ಸಮಾಜದ ಹಿರಿಯರೊಂದಿಗೆ ಚರ್ಚಿಸಿ, ಸಮಾಜವನ್ನು ಮತ್ತಷ್ಟು ಬಲಪಡಿಸುವುದಾಗಿ ಹೇಳಿದರು.
ಮಾಜಿ ಅಧ್ಯಕ್ಷ ತಿಮ್ಮೇನಳ್ಳಿ ಚಂದಪ್ಪ, ಗೌರವ ಅಧ್ಯಕ್ಷ ಕೋಣನತಲೆ ನಾಗಪ್ಪ, ನಾಗೇಂದ್ರಪ್ಪ, ಬೇಲಿಮಲ್ಲೂರು ಶಿವಾ ನಂದ್, ಶಿಕ್ಷಕ ಹನುಮಂತಪ್ಪ, ಚಂದ್ರಪ್ಪ, ಕಾರ್ಯದರ್ಶಿ ಪ್ರವೀಣ್, ಪಂಚಾಯ್ತಿ ಸದಸ್ಯ ರಾಜೇಂದ್ರ, ಕುಳ ಗಟ್ಟಿ ಹನುಮಂತ, ನಾಗ ರಾಜ್, ಪ್ರಭುಗೌಡ, ಶೇಖರಪ್ಪ ಇನ್ನಿತರರು ಉಪಸ್ಥಿತರಿದ್ದರು.