ಇಂದಿನಿಂದ ಸಂಜೆ 5 ರವರೆಗೆ ಹೋಟೆಲ್ಗಳು ಸೇವೆ ಒದಗಿಸಲು ಅವಕಾಶ
ಲಾಕ್ಡೌನ್ ಹಾಗೂ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ಹೋಟೆಲ್ಗಳು
ದಾವಣಗೆರೆ, ಜು.27- ಕೊರೊನಾದಿಂದ ಅತಿ ಹೆಚ್ಚು ಪೆಟ್ಟು ತಿಂದಿರುವ ಹೋಟೆಲ್ ಉದ್ಯಮಕ್ಕೆ ದರ ಏರಿಕೆಯ ಬಿಸಿ ಮತ್ತೊಂದು ಪೆಟ್ಟು ನೀಡಿದೆ.
ಕಳೆದ ವರ್ಷ ಲಾಕ್ಡೌನ್ ಪರಿಣಾಮ ಹೋಟೆಲ್ ಉದ್ಯಮ ಅತಿ ಹೆಚ್ಚು ನಷ್ಟ ಅನು ಭವಿಸಿತ್ತು. ಇನ್ನೇನು ಚೇತರಿಕೆ ಕಾಣಬೇಕೆನ್ನುವಷ್ಟ ರಲ್ಲಿ ಕೋವಿಡ್ ಎರಡನೇ ಅಲೆ ಪೆಟ್ಟು ನೀಡಿತು.
ಇದೀಗ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಬೆಳಿಗ್ಗೆ 6 ರಿಂದ ಸಂಜೆ 5ರವರೆಗೆ ಹೋಟೆಲ್ ಸೇವೆ ಒದಗಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ವಸ್ತುಗಳ ಬೆಲೆ ಏರಿಕೆ ಬಿಸಿ, ಹೋಟೆಲ್ ಮಾಲೀಕರನ್ನು ಕಾಡುತ್ತಿದೆ.
ಸೋಂಕು ಕಡಿಮೆಯಾಗಿದೆಯಾದರೂ ಜನರಲ್ಲಿ ಭಯ ಕಡಿಮೆಯಾಗಿಲ್ಲ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅಷ್ಟಾಗಿ ಜನರು ಹೋಟೆಲ್ಗಳಿಗೆ ಬರುವುದು ಕಡಿಮೆಯೇ. ಇನ್ನು ಅಡುಗೆ ಎಣ್ಣೆ ಸೇರಿದಂತೆ ಹೋಟೆಲ್ಗಳಲ್ಲಿ ಬಳಸುವ ಅಡುಗೆ ಪದಾರ್ಥಗಳ ಬೆಲೆ ಗಗನಕ್ಕೇರಿದೆ.ಹಳೆಯ ದರ ದಲ್ಲಿಯೇ ಸೇವೆ ನೀಡಿದರೆ ನಷ್ಟದಲ್ಲಿ ಹೋಟೆಲ್ ನಡೆಸಬೇಕಾಗುತ್ತದೆ. ದರ ಏರಿಸಿದರೆ ಬರುವ ಗ್ರಾಹಕರನ್ನೂ ಕಳೆದುಕೊಳ್ಳಬೇಕಾದೀತು ಎಂಬ ಭಯ ಮಾಲೀಕರದ್ದು.
ಹೋಟೆಲ್ ಉದ್ದಿಮೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಜನತಾವಾಣಿಯೊಂದಿಗೆ ಮಾತ ನಾಡಿದ ಹೋಟೆಲ್ ಉದ್ದಿಮೆದಾರರ ಸಂಘದ ಗೌರವಾಧ್ಯಕ್ಷ ಅಣಬೇರು ರಾಜಣ್ಣ ಅವರು, 1250 ರೂ.ಗಳಿಗೆ ಸಿಗುತ್ತಿದ್ದ 15 ಕೆ.ಜಿ. ಅಡುಗೆ ಎಣ್ಣೆಯ ಟಿನ್ ಬೆಲೆ ಈಗ 2700 ರೂ.ಗಳಷ್ಟಾಗಿದೆ. ಇದೊಂದು ಸ್ಯಾಂಪಲ್ ಅಷ್ಟೇ. ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಎಲ್ಲಾ ಅಡುಗೆ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ. ಈಗಾಗಲೇ ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದ ಹೋಟೆಲ್ ಉದ್ದಿಮೆ. ಬೆಲೆ ಏರಿಕೆ ಬಿಸಿಯಿಂದ ಮತ್ತಷ್ಟು ನಲುಗಿದೆ ಎಂದರು.
ವಿದ್ಯುತ್ ಬಳಕೆ ಇಲ್ಲದಾಗ ಬಿಲ್ ಮನ್ನಾ ನಿರ್ಧಾರ
ಸರ್ಕಾರ ಹೋಟೆಲ್, ರೆಸಾರ್ಟ್ಗಳ 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡುವುದಾಗಿ ಹೇಳಿದೆ. ಕಳೆದ ಮೂರು ತಿಂಗಳಿನಿಂದ ಹೋಟೆಲ್ಗಳು ಬಾಗಿಲು ತೆರೆದಿಲ್ಲ. ವಿದ್ಯುತ್ ಬಳಕೆ ಮಾಡಿಲ್ಲ. ಹೀಗಿದ್ದಾಗ ವಿದ್ಯುತ್ ಬಿಲ್ ಬರುವುದಾದರೂ ಎಷ್ಟು ? ಎಂದು ಹೋಟೆಲ್ ಉದ್ದಿಮೆದಾರರ ಸಂಘದ ಗೌರವಾಧ್ಯಕ್ಷ ಅಣಬೇರು ರಾಜಣ್ಣ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತದಿಂದ ಲಸಿಕೆ ನೀಡಲಿ
ಹೋಟೆಲ್ ಉದ್ಯಮದಲ್ಲಿರುವ ಪ್ರತಿಯೊಬ್ಬರಿಗೂ ಸರ್ಕಾರ ಲಸಿಕೆ ನೀಡಬೇಕು ಎಂದು ಒತ್ತಾಯಿಸಿರುವ ಅಣಬೇರು ರಾಜಣ್ಣ, ಹೋಟೆಲ್ ಕಾರ್ಮಿಕರು ಲಸಿಕೆ ಪಡೆದು ಆರೋಗ್ಯವಾಗಿದ್ದರೆ, ಗ್ರಾಹಕರ ಆರೋಗ್ಯವೂ ಸುರಕ್ಷಿತವಾಗಿರುತ್ತದೆ ಎಂದರು. ಲಸಿಕೆ ನೀಡುವ ಬಗ್ಗೆ ಶೀಘ್ರ ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ಹೇಳಿದರು.
ನಗರದಲ್ಲಿ 40ಕ್ಕೂ ಹೆಚ್ಚು ದೊಡ್ಡ ಹೋಟೆಲ್ಗಳಿವೆ. 150 ಸಾಮಾನ್ಯ ಹೋಟೆಲ್ಗಳಿದ್ದರೆ, 400-500 ಫುಟ್ ಪಾತ್ ಹೋಟೆಲ್ಗಳಿವೆ. ಫುಟ್ ಪಾತ್ ಹೋಟೆಲ್ಗಳಲ್ಲಿ ಕಾರ್ಮಿಕರು ಕಡಿಮೆ. ಆದರೆ ದೊಡ್ಡ ಹೋಟೆಲ್ಗಳಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರಿರು ತ್ತಾರೆ. ಮೂರ್ನಾಲ್ಕು ತಿಂಗಳು ಯಾವುದೇ ಆದಾಯ ಇರದಿದ್ದರೂ ಕಾರ್ಮಿಕರಿಗೆಲ್ಲಾ ವೇತನ, ಪಿ.ಎಫ್., ಇ.ಎಸ್.ಐ. ಸೇರಿದಂತೆ ಸಾಮಾಜಿಕ ಭದ್ರತೆ ಜೊತೆಗೆ ಲಾಕ್ ಡೌನ್ ಅವಧಿಯಲ್ಲೂ ವೇತನ ನೀಡಬೇಕಾಗುತ್ತದೆ ಎಂದರು.
ನೆರವಿಗೆ ಬಾರದ ಸರ್ಕಾರ: ಸರ್ಕಾರ ಇದುವರೆಗೂ ಹೋಟೆಲ್ ಉದ್ದಿಮೆದಾರರ ನೆರ ವಿಗೆ ಧಾವಿಸಿಲ್ಲ. ಹೆಚ್ಚಾಗಿ ಅನಕ್ಷರಸ್ಥರೇ ಹೋಟೆಲ್ ಗಳಲ್ಲಿ ಕೆಲಸಕ್ಕೆ ಬರುತ್ತಾರೆ. ಅವರಿಗೆ ಬಟ್ಟೆ, ಊಟ, ವೇತನ ನೀಡುವ ಜೊತೆಗೆ ಅವರ ಕಷ್ಟಗಳ ಲ್ಲೂ ಭಾಗಿಯಾಗುವುದು ಮಾಲೀಕರೇ ಎಂದರು.
ಇಲ್ಲಿಯವರೆಗೆ ಹೋಟೆಲ್ ಗಳಿಂದ ಯಾರಿಗೂ ಸೋಂಕು ಹರಡಿದ ಉದಾಹರಣೆಗಳಿಲ್ಲ. ಇಷ್ಟು ದಿನವೂ ಸ್ವಚ್ಛತೆ, ರುಚಿಗೆ ಆದ್ಯತೆ ನೀಡುತ್ತಿದ್ದೇವೆ. ಮುಂದೆಯೂ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಕೃತಜ್ಞತೆ: ಕೊರೊನಾ ವೇಳೆ ರೈತರಿಂದಲೇ ಜನರು ಉಳಿದಿದ್ದಾರೆ ಎಂದು ಸ್ಮರಿಸಿದ ರಾಜಣ್ಣ, ಕಳೆದ ಹಲವಾರು ತಿಂಗಳುಗಳಿಂದ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ಸೋಂಕಿತರ ಸೇವೆಯಲ್ಲಿ ಭಾಗಿಯಾದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವೈದ್ಯರು, ನರ್ಸ್ಗಳು ಹಾಗೂ ಉಚಿತ ಲಸಿಕೆ ನೀಡುತ್ತಿರುವ ಶಾಮನೂರು ಶಿವಶಂಕರಪ್ಪ ಹಾಗೂ ಕುಟುಂಬ, ಹಾಸ್ಟೆಲ್ಗಳನ್ನು
ಕೋವಿಡ್ ಕೇರ್ ಸೆಂಟರ್ಗಳನ್ನಾಗಿಸಲು ಹಾಗೂ ದಾನ-ಧರ್ಮಕ್ಕೆ ಮಾರ್ಗದರ್ಶನ ನೀಡಿದ ತರಳಬಾಳು ಜಗದ್ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.