ಜಿಲ್ಲೆಯಲ್ಲಿ ಪಾಸಿಟಿವಿಟಿ ಶೇ.4.27ಕ್ಕೆ ಇಳಿಕೆ

ದಾವಣಗೆರೆ, ಜು.24- ಜಿಲ್ಲೆಯಲ್ಲಿ ಕೊರೊನಾ ಸೋಂಕು ಪಾಸಿಟಿವಿಟಿ ದರವು  ಜೂ.23ರ ವರದಿಯಂತೆ ಶೇ.4.27ಕ್ಕೆ ಇಳಿಕೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿದ್ದ ಕೋವಿಡ್ ಕೇರ್ ಸೆಂಟರ್‌ಗಳ ಸಂಖ್ಯೆಯೂ ಇಳಿಕೆಯಾಗಿದೆ.

ದಿನೇ ದಿನೇ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ  ಹಲವು ದಿನಗಳಿಂದ ಆಸ್ಪತ್ರೆಗಳಲ್ಲಿ ಐಸೋಲೇಷನ್ , ವೆಂಟಿಲೇಟರ್‌ ಬೆಡ್‌ಗಳಿಗೆ ಬೇಡಿಕೆ ತಗ್ಗಿದೆ.

ಜಿಲ್ಲೆಯಲ್ಲಿ ಸೋಂಕು ಹೆಚ್ಚಳ ತಡೆಯಲು, ಸೋಂಕಿನ ಸರಪಳಿ ತುಂಡು ಮಾಡಲು ಜಿಲ್ಲಾಡಳಿತವು ಕೋವಿಡ್  ಕೇರ್ ಸೆಂಟರ್‌ಗಳನ್ನು ಹೆಚ್ಚು ಮಾಡಲು ತೀರ್ಮಾನಿಸಿತ್ತು.

ಅದರಂತೆ ದಾವಣಗೆರೆ ನಗರ ಹಾಗೂ ತಾಲ್ಲೂಕುಗಳಲ್ಲಿ ಸುಮಾರು 28 ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಸುಮಾರು 2500 ಸೋಂಕಿತರು ಈ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸೋಂಕು ದೃಢಪಟ್ಟಾಗ ಹೆಚ್ಚಾಗಿ ಜನತೆ ಹೋಮ್ ಐಸೋಲೇಷನ್‌ನಲ್ಲಿ ಇರಲು ಬಯಸುತ್ತಿದ್ದರು. ಮಧ್ಯಮ ವರ್ಗದ ಜನತೆಯಂತೂ ಕೋವಿಡ್ ಕೇರ್ ಸೆಂಟರ್‌ಗಳಿಗೆ ಬರಲು ಒಪ್ಪುತ್ತಿರ ಲಿಲ್ಲ. ಇದರಿಂದ ಸೋಂಕು ಕುಟುಂಬದ ಇತರೆ ಸದಸ್ಯರುಗಳಿಗೂ ತಗುಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿತ್ತು.

ಇದನ್ನು ಮನಗಂಡ ಜಿಲ್ಲಾಡಳಿತವು ದಾವಣಗೆರೆಯಲ್ಲಿ ತರಳಬಾಳು ಸಂಸ್ಥೆಗೆ ಸೇರಿದ್ದ ಒಂದು ಹಾಸ್ಟೆಲ್‌, ಹರಿಹರದಲ್ಲಿ ಶ್ರೀ ಶೈಲ ಮಠದಿಂದ ಒಂದು ಕೋವಿಡ್ ಕೇರ್ ಸೆಂಟರ್, ಅಲ್ಪಸಂಖ್ಯಾತರಿಗಾಗಿ ತಾಜ್ ಪ್ಯಾಲೇಸ್ ಸೇರಿದಂತೆ ತಾಲ್ಲೂಕು ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ಆರಂಭಿಸಿತ್ತು.

ದಿನ ಕಳೆದಂತೆ ಸೋಂಕು ಗ್ರಾಮೀಣ ಭಾಗದಲ್ಲಿಯೂ ಹೆಚ್ಚಾಗಿದ್ದ ರಿಂದ  ಅಂಗನವಾಡಿ ಕಾರ್ಯಕರ್ತರು, ಪಿಡಿಒಗಳು, ವೈದ್ಯರು ಸೇರಿದ ಟಾಕ್ಸ್ ಫೋರ್ಸ್ ತಂಡ ರಚಿಸಿ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಅಭಿಯಾನ ಆರಂಭಿಸಿ, ಕೋವಿಡ್ ಟೆಸ್ಟ್‌ ಗುರಿ ಹೆಚ್ಚಿಸಿ, ಸೋಂಕಿತರನ್ನು ಮನವೊಲಿಸಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಕರೆತರ ಲಾಗುತ್ತಿತ್ತು. ಈ ಎಲ್ಲಾ ಕಾರಣ ಗಳಿಂದಾಗಿ 24ಕ್ಕೆ ಇದ್ದ ಪಾಸಿಟಿವಿಟಿ ರೇಟ್ ಇದೀಗ 5.09ಕ್ಕೆ ಇಳಿಕೆಯಾಗಿದೆ.

ಲಸಿಕೆಯತ್ತ ಹೆಚ್ಚಿನ ಗಮನ: ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಇದೀಗ ಲಸಿಕೆ ಹಾಕಿಸುವತ್ತ ಗಮನ ಹರಿಸಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.

ಸರ್ಕಾರ 18 ರಿಂದ 44 ವರ್ಷ ವಯೋಮಿತಿಯವರಿಗೂ ಲಸಿಕೆ ನೀಡಲು ಆದೇಶಿಸಿದ್ದು, ಅದರಂತೆ ಎಲ್ಲರೂ ಲಸಿಕೆ ಪಡೆಯುತ್ತಿದ್ದಾರೆ.  ಜಿಲ್ಲೆಯಲ್ಲಿ ಈ ವರೆಗೆ 4.83 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಸೋಮ ವಾರ ಒಂದೇ ದಿನ ಅತಿ ಹೆಚ್ಚು ಅಂದರೆ  28,123 ಜನರಿಗೆ ಲಸಿಕೆ ನೀಡಲಾಗಿತ್ತು. ಅದಕ್ಕಿಂತ ಮೊದಲು ಜೂ.12ರ ಶನಿವಾರ 15 ಸಾವಿರ ಜನರಿಗೆ ಲಸಿಕೆ ನೀಡಲಾಗಿತ್ತು ಎಂದವರು ಹೇಳಿದರು.

ಸರ್ಕಾರದಿಂದ ಹೆಚ್ಚು ಲಸಿಕೆ ಬಂದರೆ ನಾವು ಜನತೆಗೆ ಹೆಚ್ಚು ಲಸಿಕೆ ಕೊಡಲು ರೆಡಿಯಾಗಿದ್ದೇವೆ. ಲಸಿಕೆ ಯಿಂದ ಸಮುದಾಯದಲ್ಲಿ ಸೋಂಕು ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.

error: Content is protected !!