ದಾವಣಗೆರೆ, ಮಾ. 23- ಸಾವಿನ ನಂತರವೂ ಜೀವಂತವಾಗಿರುವ ವಿರಳಾತಿ ವಿರಳರ ಸಾಲಿನಲ್ಲಿ, ಭಗತ್ಸಿಂಗ್, ರಾಜಗುರು, ಸುಖದೇವ ಮೊದಲಿಗರಾಗಿ ನಿಲ್ಲುತ್ತಾರೆ ಎಂದು ಎ.ಐ.ವೈ.ಎಫ್. ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ತಿಳಿಸಿದ್ದಾರೆ.
ಅವರು ಭಗತ್ಸಿಂಗ್ ಬಲಿದಾನ ದಿನದ ಪ್ರಯುಕ್ತ ನಗರದ ರೈಲ್ವೇ ನಿಲ್ದಾಣದ ಮುಂಭಾಗದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಇಂದಿಗೂ ತಲೆಮಾರಿನಿಂದ ತಲೆ ಮಾರಿಗೆ ಬೆಳಕು ನೀಡುತ್ತಾ ನಿತ್ಯ ಸ್ಪೂರ್ತಿಯಾಗುತ್ತಾ ಭಗತ್ಸಿಂಗ್ ನಮ್ಮ ನಡುವಿದ್ದಾರೆ. ವಿದ್ಯಾರ್ಥಿ ಯುವ ಜನ ಭಗತ್ಸಿಂಗ್ ಆದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದು ವಾಸು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಕೆರನಹಳ್ಳಿ ರಾಜು, ಎ. ತಿಪ್ಪೇಶಿ, ಜೀವನ ನಿಟುವಳ್ಳಿ, ಫಜಲುಲ್ಲಾ, ಗದಿಗೇಶ್ ಪಾಳೇದ್, ಇರ್ಫಾನ್, ಹೆಚ್.ಕೆ. ಸಂಪತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.