ದಾವಣಗೆರೆ, ಮಾ.23- ಇಲ್ಲಿನ ರುದ್ರಭೂಮಿ ರಸ್ತೆಯಲ್ಲಿರುವ ಚೌಡೇಶ್ವರಿ ನಗರದ ಬೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ, ಶ್ರೀ ಭೂತನಾಥೇಶ್ವರ ಸ್ವಾಮಿ ಕಾಲಭೈರವ ದೇವಸ್ಥಾನದ ಎಡೆ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಚೌಡೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯ, ಎಡೆ ಜಾತ್ರೆ ಹಾಗೂ ಸಂಜೆ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ದೂಡಾ ಮಾಜಿ ಅಧ್ಯಕ್ಷ ಮಾಲತೇಶ ರಾವ್ ಜಾಧವ್ ಇತರರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದರು .
December 27, 2024