ಎಲ್ಲಾ ವಹಿವಾಟಿಗೆ ಅವಕಾಶ ನೀಡಿ

ದಾವಣಗೆರೆ, ಜೂ.22- ಜಿಲ್ಲೆಯಲ್ಲಿ ಎಲ್ಲಾ ವ್ಯಾಪಾರ, ವಹಿವಾಟಿಗೆ ಅನುಮತಿ ನೀಡುವಂತೆ ಶಾಸಕ ಶಾಮನೂರು ಶಿವಶಂಕರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಬೆಳಿಗ್ಗೆ ನಗರದ ಜವಳಿ, ಬೆಳ್ಳಿ-ಬಂಗಾರ ವರ್ತಕರು ಸೇರಿದಂತೆ ಹಲವು ವಾಣಿಜ್ಯ ವಹಿವಾಟುಗಳ ವರ್ತಕರ ನಿಯೋಗ ಎಸ್ಸೆಸ್ ನಿವಾಸಕ್ಕೆ ಆಗಮಿಸಿ ಮನವಿ ಸಲ್ಲಿಸಿತು.

ಈ ಮನವಿಗೆ ಸ್ಪಂದಿಸಿದ ಎಸ್ಸೆಸ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಸಂಪರ್ಕಿಸಿ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟುಗೆ ಅನುಮತಿ ನೀಡುವಂತೆ ಸೂಚಿಸಿದರು.

ಜಿಲ್ಲಾಧಿಕಾರಿಗಳು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಇಂದು ಅಥವಾ ನಾಳೆಯಿಂದಲೇ ಲಾಕ್ ಡೌನ್ ತೆರವಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳು ಭರವಸೆ ನೀಡಿ ಸ್ವಲ್ಪ ಸಮಯದಲ್ಲೇ ಸರ್ಕಾರದಿಂದ ದಾವಣಗೆರೆ ಸೇರಿದಂತೆ 4 ಜಿಲ್ಲೆಗಳಿಗೆ ಅನ್ವಯವಾಗುವಂತೆ  ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಎಲ್ಲಾ ರೀತಿಯ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ ನೀಡಿರುವುದಾಗಿ ಆದೇಶ ಬಂದಿದೆ.

ಈ ಸಂದರ್ಭದಲ್ಲಿ ವರ್ತಕರುಗಳಾದ ಬಿ.ಸಿ.ಉಮಾಪತಿ, ಜಾವೀದ್ ಸಾಬ್, ವಿಜಯ್ ಎಸ್.ಜೈನ್, ಜೆ.ಹೆಚ್. ರಮೇಶ್, ಸುರೇಶ್ ಕುಮಾರ್, ಮಹೇಂದ್ರ, ಕಾಂತಿಲಾಲ್, ವಸಂತಕುಮಾರ್, ಕವಿತಾ ಚಂದ್ರಶೇಖರ್ ಮತ್ತಿತರರಿದ್ದರು.

error: Content is protected !!