ಹೊನ್ನಾಳಿ, ಮಾ.22- ಪಟ್ಟಣದ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಉಪಾಧ್ಯಕ್ಷರಾಗಿ ಅಲ್ತಾಫ್ ಸಾಬ್ ಅವಿರೋಧವಾಗಿ ಆಯ್ಕೆಯಾದರು.
ನೂತನ ನಿರ್ದೇಶಕರಾದ ಎನ್.ಕೆ. ಆಂಜನೇಯ, ಎನ್.ಜೆ. ಮರುಳಸಿದ್ದಪ್ಪ, ಕೆ.ಆರ್. ವಸಂತ್ ನಾಯ್ಕ, ಎಚ್.ಕೆ. ನಾಗರಾಜಪ್ಪ, ಜಿ. ಗೋವಿಂದಪ್ಪ, ಡಿ. ಸಿದ್ದಪ್ಪ, ಆರ್. ರೇಣುಕಪ್ಪ, ಬಸವನಹಳ್ಳಿ ಎಚ್.ಡಿ. ಬಸವರಾಜಪ್ಪ, ಎಚ್.ಬಿ. ಬೆನಕಪ್ಪ, ಟಿ. ಗಿರಿಯಪ್ಪ, ಎಚ್.ಡಿ. ವಿಜೇಂದ್ರಪ್ಪ, ಉಪಸ್ಥಿತರಿದ್ದರು.