ದಾವಣಗೆರೆ, ಮಾ.22- ನಗರದಲ್ಲಿರುವ ಭಾರತೀಯ ಜೀವ ವಿಮಾ ಷೇರು ಬಂಡವಾಳವನ್ನು ಹಿಂತೆಗೆದು ಐಪಿಓ ಮುಖಾಂತರ ಷೇರು ಮಾರಾಟಕ್ಕೆ ಹೂಡುವುದನ್ನು ವಿರೋಧಿಸಿ ನಗರದ ಕೆ.ಆರ್. ರಸ್ತೆಯಲ್ಲಿನ ಜೀವ ವಿಮಾ ಕಚೇರಿ ಮುಂಭಾಗದಲ್ಲಿ ಜೀವ ವಿಮಾ ಪ್ರತಿನಿಧಿಗಳು, ನೌಕರರು ಪ್ರತಿಭಟನೆ ನಡೆಸಿದರು. ವಿದೇಶಿ ನೇರ ಬಂಡವಾಳವನ್ನು ಶೇ.49ರಿಂದ ಶೇ.74ಕ್ಕೆ ಹೆಚ್ಚಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.
ಪ್ರತಿಭಟನೆಯಲ್ಲಿ ಜೀವ ವಿಮಾ ಏಜೆಂಟ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಂ.ಎಸ್. ನಾಗರಾಜ್, ಅಧ್ಯಕ್ಷ ಎಸ್.ಜಿ. ಪಂಪಣ್ಣ,
ಕಾರ್ಯದರ್ಶಿ ಡಿ.ಸಿ. ಶಿವಮೂರ್ತಿ, ಖಜಾಂಚಿ ಹೆಚ್. ಸಿದ್ದರಾಮೇಶ್ವರ ಸೇರಿದಂತೆ ಜೀವ ವಿಮಾ ನೌಕರರ ವರ್ಗ, ಅಖಿಲ ಭಾರತ ಜೀವ ನಿಗಮ ಪ್ರತಿನಿಧಿಗಳ ಸಂಘ, ಕ್ಲಾಸ್ -1 ಆಫೀಸರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ನೌಕರರು, ಅಧಿಕಾರಿಗಳು ಭಾಗವಹಿಸಿದ್ದರು.