ನಂದಿಗುಡಿ ಬಸವಣ್ಣನ ಜಾತ್ರೆಗೆ ಚಾಲನೆ : 25ರಂದು ರಥೋತ್ಸವ

ಮಲೇಬೆನ್ನೂರು, ಮಾ.21 – ಸುಕ್ಷೇತ್ರ ನಂದಿಗುಡಿಯಲ್ಲಿ ಇಂದಿನಿಂದ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವಕ್ಕೆ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಭಾನುವಾರ ನಂದಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಗಣಪತಿ ಪೂಜೆ, ಸೂರ್ಯ ದೇವರಿಗೆ ಅರ್ಘ್ಯ ಪೂಜೆ ನೆರವೇರಿಸಲಾಯಿತು. ರಥೋತ್ಸವದ ಅಂಗವಾಗಿ ರಾತ್ರಿ ಶ್ರೀ ಬಸವೇಶ್ವರ ದೇವರಿಗೆ ಕಂಕಣಧಾರಣೆ ಮಾಡಲಾಯಿತು.

ನಾಳೆ ದಿನಾಂಕ 22 ರ ಸೋಮವಾರ ಬೆಳಿಗ್ಗೆ ಶ್ರೀ ನಂದಿ ಪಟದೊಂದಿಗೆ ಪೂಜಾ ಮೆರವಣಿಗೆ ನಂತರ ಎಣ್ಣೆ ಅರಿಶಿಣ ಕಾರ್ಯಕ್ರಮ, ರಾತ್ರಿ ಶ್ರೀ ನಂದಿ ಉತ್ಸವ ಮೂರ್ತಿಯ ಗಜೋತ್ಸವದ ಉಚ್ಚಾಯವು ಗ್ರಾಮದ ರಾಜಬೀದಿಗಳಲ್ಲಿ ಜರುಗಲಿದೆ.

ದಿನಾಂಕ 23 ರ ಮಂಗಳವಾರ ಶ್ರೀ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಶ್ರೀ ನಂದಿ ಉತ್ಸವ ಮೂರ್ತಿಯ ಪುಷ್ಪೋತ್ಸವ ನೆರವೇರಲಿದೆ.

ದಿನಾಂಕ 24 ರ ಬುಧವಾರ ಬೆಳಿಗ್ಗೆ ಕರ್ತೃ ಗದ್ದುಗೆಗಳಿಗೆ ಹಾಗೂ ಬಸವೇಶ್ವರ ದೇವರಿಗೆ ಮಹಾರುದ್ರಾಭಿಷೇಕ ನಂತರ ಶಿವದೀಕ್ಷೆ ಸಂಸ್ಕಾರ, ಮಂತ್ರೋಪದೇಶ, ಬೆಳಿಗ್ಗೆ 10.30ಕ್ಕೆ ಗೋವಿನಹಾಳ್ ದಡ್ಡಿಮನೆ ವಂಶಸ್ಥರರಿಂದ ದೇವರಿಗೆ ಬಾಸಿಂಗ ಧಾರಣೆ ನಂತರ ಮಹಾರಥೋತ್ಸವಕ್ಕೆ ಕಳಾಸರೋಹಣ ಶ್ರೀಗಳಿಂದ ರಥ ಪೂಜೆ , ಶಸ್ತ್ರ ಹಾಕುವ ಕಾರ್ಯಕ್ರ ನಡೆಯುವುದು. ದಿನಾಂಕ 25 ಗುರುವಾರ ಬೆಳಿಗ್ಗೆ 8.30ಕ್ಕೆ ರುದ್ರ ಗುಗ್ಗಳ ಹಾಗೂ ಶ್ರಿ ಸಿದ್ದರಾಮೇಶ್ವರ ಶ್ರೀಗಳವರ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಶ್ರಿ ಬಸವೇಶ್ವರ ದೇವರ ರಥೋತ್ಸವ ಜರುಗಲಿದೆ. ಸಂಜೆ ದೊಡ್ಡ ಬಂಡಿ ಪ್ರದರ್ಶನದ ನಂತರ ಓಕುಳಿ, ಕಂಕಣ ವಿಸರ್ಜನೆ ಮಾಡಲಾಗುವುದು. ದಿನಾಂಕ 26 ರ ಶುಕ್ರವಾರ ಬೆಳಿಗ್ಗೆ ಶ್ರೀ ಬಸವೇಶ್ವರ ಪಾಲಿಕೆ ಉತ್ಸವದೊಂದಿಗೆ ಬುಕ್ಕಿಟ್ಟಿನ ಸೇವೆಯೊಂದಿಗೆ ಜಾತ್ರೆಗೆ ತೆರೆ ಎಳೆಯಲಾಗುವುದು.

error: Content is protected !!