ಜಿಲ್ಲೆಯಲ್ಲಿ 183 ಪಾಸಿಟಿವ್

ದಾವಣಗೆರೆ, ಜು.15- ಜಿಲ್ಲೆಯಲ್ಲಿ ಮಂಗಳವಾರ 183 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 7 ಜನರು ಮೃತಪಟ್ಟಿದ್ದಾರೆ. 789 ಜನರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ. ದಾವಣಗೆರೆ ತಾಲ್ಲೂಕಿನಲ್ಲಿ 69, ಹರಿಹರ 24, ಜಗಳೂರು 7, ಚನ್ನಗಿರಿ 30, ಹೊನ್ನಾಳಿ 38 ಹಾಗೂ ಹೊರ ಜಿಲ್ಲೆ 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ದಾವಣಗೆರೆ ಮುದ್ದಾಭೋವಿ ಕಾಲೋನಿಯ 65 ವರ್ಷದ ಪುರುಷ, ಎಂ.ಸಿ.ಸಿ. ಎ ಬ್ಲಾಕ್ 72 ವರ್ಷದ ಮಹಿಳೆ, ಹೊನ್ನಾಳಿ ತಾಲ್ಲೂಕು ಅರೇಹಳ್ಳಿಯ 33 ವರ್ಷದ ಯುವಕ, ಟಿ.ಜಿ. ಹಳ್ಳಿಯ 42 ವರ್ಷದ ಪುರುಷ, ತಾಕನಹಳ್ಳಿಯ 22 ವರ್ಷದ ಯುವಕ, ಚನ್ನಗಿರಿ ತಾಲ್ಲೂಕು ನಲ್ಲೂರು ಗ್ರಾಮದ 27 ವರ್ಷದ ಯುವಕ, ಚನ್ನಗಿರಿ ಬೀರಲಿಂಗೇಶ್ವರ ಬಡಾವಣೆಯ 27 ವರ್ಷದ ಯುವತಿ ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 3655 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿವರೆಗೆ 47668 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 43565 ಜನರು ಗುಣಮುಖರಾಗಿದ್ದಾರೆ.448 ಜನರು ಮೃತಪಟ್ಟಿದ್ದಾರೆ.

3 ಬ್ಲಾಕ್ ಫಂಗಸ್ ಪ್ರಕರಣ:  ಮಂಗಳವಾರ 3 ಬ್ಲಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದು, ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿವರೆಗೆ 82 ಪ್ರಕರಣಗಳು ವರದಿಯಾಗಿದ್ದು, 45 ಸಕ್ರಿಯ ಪ್ರಕರಣಗಳಿವೆ.

error: Content is protected !!