ಕೊರೊನಾ : ವೀರಶೈವ ಸದ್ಬೋಧನಾ ಸಂಸ್ಥೆಯಿಂದ ಹೋಮ

ದಾವಣಗೆರೆ, ಜೂ.14 – ಲೋಕ ಕಲ್ಯಾಣ ಹಾಗೂ ಕೊರೊನಾ ಸೋಂಕು ಕಡಿಮೆಯಾಗಲಿ ಎಂದು ಪ್ರಾರ್ಥಿಸಿ ಶ್ರೀಮದ್‍ ವೀರಶೈವ ಸದ್ಬೋಧನಾ ಸಂಸ್ಥೆ  ವತಿಯಿಂದ ನಗರದ ಶಿವಾಲಿ ಚಿತ್ರಮಂದಿರದ ಬಳಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದಲ್ಲಿ  ಮೃತ್ಯುಂಜಯ ಹಾಗೂ ಪ್ರತ್ಯಂಗೀರ ಹೋಮವನ್ನು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಇಂದು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ವೀರಶೈವ  ಸದ್ಬೋಧನಾ ಸಂಸ್ಥೆಯ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಮಾತನಾಡಿ, ಕೊರೊನಾ ಮಹಾಮಾರಿಗೆ  ತುತ್ತಾಗಿರುವ ಜನರು ಮೃತ್ಯುಂಜಯನ ಕೃಪೆಯಿಂದ ಆರೊಗ್ಯವಂತರಾಗಿ ಸಹಜ ಸ್ಥಿತಿಗೆ ಮರಳಲಿ. ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ನಗರ ಪಾಲಿಕೆ ಮಹಾಪೌರ ಎಸ್. ಟಿ. ವೀರೇಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್, ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣಪ್ಪ, ಪಾಲಿಕೆ ಸದಸ್ಯರುಗಳಾದ ಶಾಂತಕುಮಾರ್ ಸ್ವಾಗಿ, ಗಾಯತ್ರಿಬಾಯಿ, ಶಿವನಗೌಡ ಟಿ. ಪಾಟೀಲ್, ಸಮಾಜದ ಮುಖಂಡರುಗಳಾದ ಟಿಂಕರ್  ಮಂಜಣ್ಣ, ಮಾಗಿ ಜಯಪ್ರಕಾಶ್, ಶ್ರೀಕಾಂತ ನೀಲಗುಂದ, ಪಿ. ಅಭಿಷೇಕ್,  ಗುರುಶಾಂತ ವಿ. ಸ್ವಾಗಿ, ಗಿರೀಶ್ ದೇವರಮನೆ, ಎಳೆಹೊಳೆ ಮಂಜುಳ, ಮಹೇಶ್, ಪುಷ್ಪ ವಾಲಿ, ಶಿವಾನಂದ ಬೆನ್ನೂರು, ಮುತ್ತಣ್ಣ, ಯೊಗೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!